ರಾಜ್ಯದ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆಯೇನೋ ಅನಿಸುತ್ತದೆ.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು 187 ಕೋಟಿ ರೂ. ಹಗರಣ ಅಲ್ಲ. ಅಲ್ಲಿಂದ ಕೇವಲ 87 ಕೋಟಿ ರೂ. ಮಾತ್ರ ಬೇರೆ ಕಡೆ ವರ್ಗಾವಣೆ ಆಗಿದೆ’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದಾರೆ. ಅವರ ಈ ಮಾತು ಪರೋಕ್ಷವಾಗಿ ಹಗರಣ ನಡೆದಿರುವುದನ್ನು ಒಪ್ಪಿಕೊಂಡಂತಿದೆ.
ಇನ್ನು ಮುಡಾ ಹಗರಣದಲ್ಲಿಯೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮ ಯ್ಯನವರೇ ಆರೋಪಿ ಸ್ಥಾನದಲ್ಲಿದ್ದಾರೆ. ತಮ್ಮ ಪತ್ನಿಯ ಹೆಸರಿಗೆ ನಿವೇಶನಗಳು ನೋಂದಣಿ ಮಾಡಿಸಿಕೊಂಡಿರುವ ಆರೋಪ ಅವರ ಮೇಲಿದೆ. ಆದರೆ ಅವರು, ‘ನಾನು ಈ ವಿಚಾರದಲ್ಲಿ ತಪ್ಪಿತಸ್ಥನಲ್ಲ’ ಎಂದು ಸಮರ್ಥಿಸಿಕೊಳ್ಳಲು ಹೋಗಿ ಮತ್ತಷ್ಟು ಗೋಜಲಿಗೆ ಸಿಲುಕಿಕೊಂಡಿದ್ದಾರೆ.
ಈ ಮುಡಾ ಹಗರಣದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ‘ಸಮಾನ ಫಲಾನುಭವಿಗಳು.’ ಆದರೆ ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪಗಳನ್ನು ಮಾಡಿಕೊಂಡು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಈ ಬೆಳವಣಿಗಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವರ್ಚಸ್ಸನ್ನು ಕುಗ್ಗಿಸುತ್ತಿವೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





