ತನ್ನ ನಿವೃತ್ತ ನೌಕರರಿಗೆ ಪಿಂಚಿಣ ನೀಡಲು ಕೂಡ ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು ಎಂಬ ಆತಂಕವನ್ನು ಮೈಸೂರು ವಿಶ್ವವಿದ್ಯಾನಿಲಯವ ಕುಲಪತಿಯವರು ಇತ್ತೀಚೆಗೆ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೈಸೂರು ವಿವಿ ಸೇರಿದಂತೆ ಅನೇಕ ವಿಶ್ವವಿದ್ಯಾನಿಲಯಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಜಿಲ್ಲೆಗೊಂದುರಂತೆ ವಿಶ್ವವಿದ್ಯಾನಿಲಯಗಳು ಸ್ಥಾಪಿತ ಗೊಂಡ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಅನೇಕ ವಿಶ್ವವಿದ್ಯಾಲಯಗಳಿಗೆ, ಆರ್ಥಿಕ ಸಂಪನ್ಮೂಲಗಳನ್ನು ತಾವೇ ಕ್ರೋಡಿಕರಿಸಿಕಳ್ಳ ಬೇಕಾದ ಅನಿವಾರ್ಯತೆ ಇದೆ. ಕೆಲವು ವಿದ್ಯಾನಿಲಯಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅನುದಾನ ದೊರೆಯುತ್ತಿದ್ದರೂ ಕೂಡ, ಅದು ಸಾಕಾಗುತ್ತಿಲ್ಲ. ವಿಶ್ವವಿದ್ಯಾನಿಲಯಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ, ವಿಶ್ವ ವಿದ್ಯಾನಿಲಯಗಳ ಪುನಶ್ಚೇತನಕ್ಕೆ ಸರ್ಕಾರ ಶೀಘ್ರ ಗಮನ ಹರಿಸುವುದು ಅಗತ್ಯ.
ಕೆ.ವಿ ವಾಸು, ಮೈಸೂರು





