Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ| ಉತ್ತಮ ಸಂದೇಶ ನೀಡುವಂತಿರಲಿ

ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ, ನಟ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಕಾರ್ಯಕ್ರಮ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.

ಇದು ಒಂದು ಜನಪ್ರಿಯ ರಿಯಾಲಿಟಿ ಷೋ ಆಗಿದ್ದು, ವಿವಿಧ ಭಾಷೆಗಳ ವಾಹಿನಿಗಳೂ ಬಿಗ್ ಬಾಸ್ ಷೋ ನಡೆಸುತ್ತಿವೆ. ಆದರೆ ಕನ್ನಡದ ಬಿಗ್ ಬಾಸ್ ಸೀಸನ್-೧೧ ಕೆಲವು ವಿವಾದಾತ್ಮಕ ವ್ಯಕ್ತಿಗಳು ಹಾಗೂ ಅವರ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದೆ.

ಈ ಕಾರ್ಯಕ್ರಮದಿಂದ ಸಮಾಜಕ್ಕೆ ಏನು ಲಾಭವಿದೆ ಎಂಬುದೇ ತಿಳಿಯುತ್ತಿಲ್ಲ. ಕಾರ್ಯಕ್ರಮದ ಗುರಿ ಏನು? ಯಾವ ಉದ್ದೇಶದ ಆಧಾರದ ಮೇಲೆ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಒಂದಿಷ್ಟೂ ಅರಿವಿಲ್ಲ. ‘ಲೋಕೋ ಭಿನ್ನ ರುಚಿ’ ಎಂಬ ಮಾತಿನಂತೆ ಕೆಲವರಿಗೆ ಈ ಕಾರ್ಯಕ್ರಮ ಇಷ್ಟವಾಗ ಬಹುದು. ಆದರೆ, ದೊಡ್ಡಮಟ್ಟದಲ್ಲಿ ಟೀಕೆಗಳು ಕೇಳಿಬರುತ್ತಿವೆ. ದೊಡ್ಡ ದೊಡ್ಡ ವಾಹಿನಿಗಳು ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅದರಿಂದ ಸಮಾಜಕ್ಕೆ ಏನಾದರೂ ಒಳಿತಾಗುವಂತಿರಬೇಕು. ಈ ಬಗ್ಗೆ ವಾಹಿನಿಯವರು ಚಿಂತಿಸಿ ಬಿಗ್ ಬಾಸ್ ಕಾರ್ಯಕ್ರಮದ ರೂಪರೇಷೆ ಬದಲಾಯಿಸಿ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲಿ.
-ಕೆ. ವಿ. ವಾಸು, ವಿವೇಕಾನಂದ ನಗರ, ಮೈಸೂರು

Tags: