Mysore
22
few clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಓದುಗರ ಪತ್ರ | ಬೀದಿಬದಿ ವ್ಯಾಪಾರಿಗಳಿಗೂ ಜಿಎಸ್‌ಟಿ ಹಾಕಬಹುದು

ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಜತೆಗೆ ಹಂತ ಹಂತವಾಗಿ ಎಲ್ಲ ವಸ್ತುಗಳ ಮೇಲೆಯೂ ಜಿಎಸ್‌ಟಿ ವಿಧಿಸಲು ಮುಂದಾಗುತ್ತಿರುವುದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.

ಜನಸಾಮಾನ್ಯರಿಗೆ ಜಿಎಸ್‌ಟಿ ಹೊರೆಯಾಗಿ ಪರಿಣಮಿಸಿದೆ ಎನ್ನುವಾಗಲೇ ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೂ ಜಿಎಸ್‌ಟಿ ವಿಧಿಸಲು ಮುಂದಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳುನಾಡಿನಲ್ಲಿ ಪಾನಿಪುರಿ ಮಾರುವ ವ್ಯಾಪಾರಿಯೊಬ್ಬರು ಒಂದು ವರ್ಷದ ಅವಽಯಲ್ಲಿ ಯುಪಿಐ ಪೇಮೆಂಟ್ ಮೂಲಕ ೪೦ ಲಕ್ಷ ರೂ. ವ್ಯವಹಾರ ನಡೆಸಿದ್ದು, ಆ ವ್ಯಾಪಾರಿಗೂ ಈಗ ಜಿಎಸ್‌ಟಿ ನೋಟಿಸ್ ನೀಡಲಾಗಿದೆಯಂತೆ. ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಪಾನಿಪುರಿ ಮಾರುವವರಿಗೂ ತಮ್ಮ ವ್ಯವಹಾರ ಆಯವ್ಯಯಗಳನ್ನು ತೋರಿಸುವಂತೆ ಮಾಡಿರುವ ಜತೆಗೆ ಯುಪಿಐ ಪೇಮೆಂಟ್ ವ್ಯವಸ್ಥೆಯ ಮೂಲಕ ಕಪ್ಪು ಹಣವನ್ನು ಸುಲಭವಾಗಿ ಹುಡುಕುವುದರಲ್ಲಿ ಎಷ್ಟು ಸಹಾಯಕ ಎಂಬುದು ತಿಳಿದುಬಂದಿದೆ. ಸದ್ಯ ತಮಿಳುನಾಡಿನ ಈ ಪ್ರಕರಣ ಬೀದಿಬದಿ ವ್ಯಾಪಾರಿಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಲು ವಿತ್ತ ಸಚಿವರು ಚಿಂತಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಬೀದಿಬದಿಯ ವ್ಯಾಪಾರಿಗಳಿಗೂ ಜಿಎಸ್‌ಟಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಬಹುದು.
-ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು.

Tags:
error: Content is protected !!