Mysore
21
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಓದುಗರ ಪತ್ರ | ಚೈತ್ರಾಗೆ ಸರ್ಕಾರಿ ಉದ್ಯೋಗ ನೀಡಿ

ಖೋ-ಖೋ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಚೈತ್ರಾ ಮೈಸೂರು ಜಿಲ್ಲೆಯವರಾಗಿದ್ದು, ಮೈಸೂರಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಚೈತ್ರಾ ಭಾರತೀಯ ಮಹಿಳಾ ಖೋ-ಖೋ ತಂಡಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟುವಾಗಿದ್ದು, ಇವರು ಮೈಸೂರಿನ ತಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ಗ್ರಾಮೀಣ ಪ್ರತಿಭೆಯಾಗಿರುವ ಚೈತ್ರಾ ಖೋ-ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡವನ್ನು ಫೈನಲ್ ತಲುಪಿಸುವ ಜತೆಗೆ ಫೈನಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಉನ್ನತ ಸರ್ಕಾರಿ ಹುದ್ದೆಯನ್ನು ನೀಡಿ ಗೌರವಿಸಬೇಕು. ಆ ಮೂಲಕ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಭಾಗಹಿಸಲು ಪ್ರೋತ್ಸಾಹಿಸಬೇಕು. -ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು

Tags: