Mysore
17
few clouds

Social Media

ಬುಧವಾರ, 28 ಜನವರಿ 2026
Light
Dark

ಓದುಗರ ಪತ್ರ | ಹೆಣ್ಣು ಮಕ್ಕಳು ಬಲಿಷ್ಠರಾಗಬೇಕು

ಪ್ರತಿ ವರ್ಷ ಮಾರ್ಚ್ ೮ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹಿಳೆಯರನ್ನು ಈ ದಿನ ನೆನಪಿಸಿಕೊಳ್ಳಲಾಗುತ್ತದೆ. ಪ್ರತಿವರ್ಷ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿ, ಮಹಿಳಾ ಸಬಲೀಕರಣಕ್ಕಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಾದರೂ ಅವು ಯಶಸ್ವಿಯಾಗಿ ಜಾರಿಯಾಗಿದ್ದು ಕಡಿಮೆ. ಹೀಗಾಗಿಯೇ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಾತ್ರ ನಿಂತಿಲ್ಲ. ಹೆಣ್ಣನ್ನು ಭೂಮಿ ತಾಯಿಗೆ ಹೋಲಿಸಿ ಗೌರವಿಸುವ ಈ ಸಮಾಜದಲ್ಲಿ ಹೆಣ್ಣಿಗೆ ಅನ್ಯಾಯವಾದಾಗ ಮಾತ್ರ ನ್ಯಾಯ ದೊರಕುವುದಿಲ್ಲ ಎಂಬುದೇ ಬೇಸರದ ಸಂಗತಿ.

ಹೆಣ್ಣು ಮಕ್ಕಳು ಮನೆಯ ನಾಲ್ಕು ಗೋಡೆಯೊಳಗೆ ಮಾತ್ರ ದುಡಿಯಬೇಕು ಎಂಬ ಮನಸ್ಥಿತಿಯಿಂದ ಹೊರಬಂದು, ಶಿಕ್ಷಣ ಪಡೆದು ಸಮಾಜದ ಎಲ್ಲ ರಂಗಗಳಲ್ಲಿಯೂ ತಮ್ಮದೇ ಆದ ಸಾಧನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾನೂನುಗಳು ಜಾರಿಯಾದರೂ, ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂಬ ಹೋರಾಟಗಳು ನಡೆದರೂ ಹೆಣ್ಣಿನ ಮೇಲಿನ ಶೋಷಣೆಗಳು ನಿರಂತರವಾಗಿ ನಡೆಯುತ್ತಿವೆ. ಸೌಜ್ಯನ ಎಂಬ ಯುವತಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿ ಹಲವು ವರ್ಷಗಳೇ ಕಳೆದರೂ ಇಂದಿಗೂ ನ್ಯಾಯ ದೊರಕಿಲ್ಲ. ಹೀಗಾದರೆ ಸಮಾಜದಲ್ಲಿ ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕುವುದು ಹೇಗೆ? ಮಹಿಳೆಯರ ಸಬಲೀಕರಣವಾಗುವುದಾದರೂ ಹೇಗೆ? ಮುಂದಾದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕೊನೆಗೊಂಡು, ಹೆಣ್ಣು ಮಕ್ಕಳನ್ನು ಗೌರವಿಸುವ ಸಂಸ್ಕ ತಿ ಬೆಳೆಯಲಿ. –ಕೌಶಲ್ಯ, ಪತ್ರಿಕೋದ್ಯಮ ವಿದ್ಯಾರ್ಥಿ, ಮಾನಸ ಗಂಗೋತ್ರಿ, ಮೈಸೂರು

 

Tags:
error: Content is protected !!