Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಓದುಗರ ಪತ್ರ | ಬ್ಯಾಂಕ್‌ ಠೇವಣಿಗಳ ಮೇಲೆ ಲಾಭಾಂಶ ಸಿಗುವಂತಾಗಲಿ

ಬ್ಯಾಂಕುಗಳಲ್ಲಿ ಸಾಲದ ಪ್ರಮಾಣ ಹೆಚ್ಚಾಗುತ್ತಿದ್ದು, ಠೇವಣಿ ಸಂಗ್ರಹ ಕುಗ್ಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಠೇವಣಿ ಸಂಗ್ರಹವನ್ನು ಚುರುಕುಗೊಳಿಸುವಂತೆ ಬ್ಯಾಂಕ್‌ ಗಳ ಮುಖ್ಯಸ್ಥರ ಜತೆ ನಡೆಸಿದ ಸಭೆಯಲ್ಲಿ ಅವರು ಆದೇಶಿಸಿದ್ದಾರೆ. ಬ್ಯಾಂಕುಗಳ ಠೇವಣಿ ಹೆಚ್ಚಿಸಲು ಆದೇಶ ನೀಡಿದರೆ ಸಾಲದು, ಹೇಗೆ ಇಡುವ ಬದಲು ಹೆಚ್ಚಿಸಬೇಕು ಎಂಬುದನ್ನು ವಿಶ್ಲೇಷಿಸುವ ಪ್ರಯತ್ನವನ್ನೂ ಮಾಡಬೇಕು.

ಇತ್ತೀಚೆಗೆ ಷೇರು ಮಾರುಕಟ್ಟೆಗಳು ನಾಗಾಲೋಟದಲ್ಲಿ ಏರುತ್ತಿದ್ದು, ಹೂಡಿಕೆದಾರರು ಬ್ಯಾಂಕುಗಳಲ್ಲಿ ಠೇವಣಿ ಇಡುವ ಷೇರುಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಠೇವಣಿಗಳ ಮೇಲೆ ಶೇ.9ರಷ್ಟು ಬಡ್ಡಿದರದಲ್ಲಿ ರಿಟರ್ನ್ಸ್ ನೀಡುವ ಬ್ಯಾಂಕುಗಳು ಠೇವಣಿದಾರರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಇದೂ ಸಾಲದು ಎಂಬಂತೆ ಆ ಕಿಸಬಾಕಿ ಬಡ್ಡಿಗೂ ಟ್ಯಾಕ್ಸ್ ವಿಧಿಸುತ್ತಾರೆ. ಜನತೆ ಗಳಿಸಿದ ಆದಾಯದಲ್ಲಿ ಶೇ.47ರಷ್ಟನ್ನು ವಿವಿಧ ರೀತಿಯ ತೆರಿಗೆಯ ಹೆಸರಿನಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿದೆ. ಹೀಗಾದರೆ ಜನರು ಠೇವಣಿ ಇಡುವುದರಿಂದ ಸಿಗುವ ಲಾಭವಾದರೂ ಏನು? ಆದ್ದರಿಂದ ವಿತ್ತ ಸಚಿವರು ಠೇವಣಿಗಳ ಮೇಲೆ ಸಾರ್ವಜನಿಕರಿಗೆ ಉತ್ತಮ ಲಾಭಗಳು ಸಿಗುವಂತೆ ಮಾಡಿ ಠೇವಣಿ ಹೆಚ್ಚಿಸಲು ಯೋಜನೆಗಳನ್ನು ರೂಪಿಸಬೇಕು.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.

Tags: