ಇತ್ತೀಚೆಗೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಮೂಡಿದೆ.
ಮೊನ್ನೆ ಮೊನ್ನೆ ಕೊಲ್ಕತ್ತಾದಲ್ಲಿ ವೈದ್ಯಕೀಯ ಮೇಲೆ ವಿದ್ಯಾರ್ಥಿನಿಯ ಸಾಮೂಹಿಕವಾಗಿ ಅತ್ಯಾಚಾರ ವೆಸಗಿದಲ್ಲದೇ ಆಕೆ ಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಕೃತ್ಯವನ್ನು ಖಂಡಿಸಿ ದೇಶದಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತೀಚೆಗಂತೂ ಇಂತಹ ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ. ಹೋಟೆಲ್‌ಗಳ ಶೌಚಾಲಯಗಳು, ರೂಂಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಇಟ್ಟು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಣ ಮಾಡುವುದು, ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೂ ಅತ್ಯಾಚಾರವೆಸಗುವಂತಹ ಹೀನ ಕೃತ್ಯಗಳು ವರದಿಯಾಗುತ್ತಲೇ ಇವೆ. ಆದ್ದರಿಂದ ಸರ್ಕಾರಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ರೂಪಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





