ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಪದವಿ ಕಾಲೇಜುಗಳಲ್ಲಿ 2021-2022ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಈವರೆಗೂ ಅಧಿಕೃತ ಪದವಿ ಪ್ರಮಾಣಪತ್ರಗಳು ಲಭ್ಯವಾಗಿಲ್ಲ.
ಪದವಿ ವ್ಯಾಸಂಗ ಮುಗಿದು ಎರಡು ವರ್ಷಗಳೇ ಕಳೆದಿದರೂ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡುವ ಬಗ್ಗೆ ವಿಶ್ವವಿದ್ಯಾನಿಲಯದಲ್ಲಿ ಈವರೆಗೂ ಯಾವುದೇ ತಯಾರಿ ನಡೆಸಿಲ್ಲ ಅನಿಸುತ್ತದೆ. ಈ ಬಗ್ಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಿಚಾರಿಸಿದಾಗ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಯಲ್ಲಿ ಹೋಗಿ ಕೇಳಿ ಎನ್ನುತ್ತಾರೆ. ಇಲ್ಲವೇ ಅಲ್ಲಿಯೇ ಶುಲ್ಕ ಪಾವತಿಸಿ ಪಡೆದುಕೊಳ್ಳಿ ಎನ್ನುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಸದ್ಯ ಉನ್ನತ ವ್ಯಾಸಂಗ ಮಾಡಲು ಹಾಗೂ ಉದ್ಯೋಗ ಪಡೆಯಲು ಅಧಿಕೃತ ಪದವಿ ಪ್ರಮಾಣಪತ್ರ ಅತ್ಯಗತ್ಯವಾಗಿದೆ. ಆದ್ದರಿಂದ ವಿಶ್ವವಿದ್ಯಾ ನಿಲಯವು ಕೂಡಲೇ ಪದವಿ ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು.
-ಎಂ.ಪಿ.ದರ್ಶನ್ ಚಂದ್ರ, ವಾಣಿಜ್ಯ ವಿಭಾಗ, ಮಾನಸಗಂಗೋತ್ರಿ, ಮೈಸೂರು.