2024ರ ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್ ಪೋಗಟ್ ಫೈನಲ್ ನಿಂದ ಅನರ್ಹಗೊಂಡಿರುವುದು ಭಾರತೀಯರಿಗೆ ಅಚ್ಚರಿ ಮೂಡಿಸಿದೆ. ವಿನೇಶ್ ಫೋಗಟ್ ಕ್ವಾರ್ಟ‌್ರಫೈನಲ್ ಮತ್ತು ಸೆಮಿ ಫೈನಲ್‌ನಲ್ಲಿ ಅಗ್ರ ಬ್ಯಾಂಕಿಂಗ್‌ನಲ್ಲಿರುವ ಕುಸ್ತಿಪಟುಗಳನ್ನು ಮಣಿಸಿ ಫೈನಲ್ ತಲುಪಿದ್ದರು. ಆದರೆ ಫೈನಲ್‌ಗೂ ಮುನ್ನ ನಡೆಸಿದ ತೂಕದ ಪರೀಕ್ಷೆಯಲ್ಲಿ ದೇಹದ ತೂಕ 50 ಕೆ.ಜಿ.ಗಿಂತಲೂ 100 ಗ್ರಾಂ ಹೆಚ್ಚಾಗಿರುವುದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ವಿನೇಶ್ ಫೋಗಟ್ 3ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕಗಳನ್ನು ತಂದು ಕೊಟ್ಟಿದ್ದರು. ಈ ಬಾರಿಯೂ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಅವರು ಅನರ್ಹಗೊಂಡಿರುವುದು ಭಾರತೀಯರಿಗೆ ಬೇಸರ ಮೂಡಿಸಿದೆ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.