Mysore
29
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಓದುಗರ ಪತ್ರ| ಮೌಲ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮಗಳು

ದಶಕದ ಹಿಂದೆ ಸುದ್ದಿ ವಾಹಿನಿಗಳು ಎಂದರೆ ಜನರಲ್ಲಿ ಒಂದು ವಿಶ್ವಾಸ ಇರುತ್ತಿತ್ತು. ಮಾಧ್ಯಮಗಳು ಯಾವುದು ಸುದ್ದಿಯಾದರೂ ಅದರ ಸತ್ಯಾ ಸತ್ಯತೆಗಳನ್ನು ಪರಾಮರ್ಶಿಸಿ ಬಿತ್ತರಿಸುತ್ತವೆ ಎಂಬ ನಂಬಿಕೆ ಜನರಲ್ಲಿತ್ತು. ಆದರೆ, ಆ ನಂಬಿಕೆ ಈಗ ದೂರಾಗಿದೆ. ಜನರಿಗೆ ಮಾಧ್ಯಮಗಳು ಎಂದರೆ ಮನರಂಜನೆಯ ವಾಹಿನಿಗಳಾಗಿವೆ.

ಇತ್ತೀಚೆಗೆ ಸುದ್ದಿ ವಾಹಿನಿಗಳ ಸಂಖ್ಯೆ ಹೆಚ್ಚಾಗಿದ್ದು, ಆನ್‌ಲೈನ್ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್‌ಗಳು ಬಂದ ಮೇಲಂತೂ ಮಾಧ್ಯಮಗಳು ಮೌಲ್ಯಯುತ ಸುದ್ದಿ ಬಿತ್ತರಿಸುವು ದನ್ನೇ ಮರೆತುಬಿಟ್ಟಿವೆ ಎನ್ನಬಹುದು.
ನಟದರ್ಶನ್ ಪ್ರಕರಣವನ್ನೇ ತೆಗೆದುಕೊಳ್ಳೋಣ. ಆ ಪ್ರಕರಣ ತನಿಖೆ ಹಂತದಲ್ಲಿದ್ದು, ತನಿಖೆಯ
ವಿಚಾರಗಳನ್ನು ಪೊಲೀಸರು ಈವರೆಗೂ ಬಹಿರಂಗಪಡಿಸಿಲ್ಲ. ಅಲ್ಲದೇ ಜೈಲಿನಲ್ಲಿಯೂ ದರ್ಶನ್ ಏನು ಮಾಡುತ್ತಿದ್ದಾರೆ ಎಂಬ ವಿಚಾರವೂ ಯಾರಿಗೂ ಗೊತ್ತಿಲ್ಲ. ಆದರೆ ಮಾಧ್ಯಮಗಳು ಮಾತ್ರ ಈ ಬಗ್ಗೆ ಕಲ್ಪಿತ ವರದಿಗಳನ್ನು ಪ್ರಕಟಿಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿವೆ. ಕೆಲ ವರದಿಗಾರರು ದರ್ಶನ್ ರನ್ನು ಭೇಟಿ ಮಾಡಲು ಜೈಲಿಗೆ ಬರುವ ಕುಟುಂಬಸ್ಥರು ಹಾಗೂ ಇತರೆ ಸ್ನೇಹಿತರ ಕಾರಿನ ಮೇಲೇಯೇ ಕ್ಯಾಮೆರಾಗಳನ್ನು ಹಿಡಿದುಕೊಂಡು ಮುಗಿಬೀಳು ತ್ತಿದ್ದಾರೆ. ಇದರ ಅಗತ್ಯ ಇದೆಯೇ? ಅಲ್ಲದೆ ಇತರೆ ನಟರ ಬಳಿ ಹೋಗಿ ಅವರಿಗೆ ಇಷ್ಟವಿಲ್ಲದಿದ್ದರೂ ದರ್ಶನ್ ಬಗ್ಗೆ ಪ್ರಶ್ನಿಸಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇದರಿಂದಾಗಿ ಮಾಧ್ಯಮಗಳು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು? ಹೀಗಾದರೆ ಜನರು ಮಾಧ್ಯಮಗಳ ಮೇಲೆ ವಿಶ್ವಾಸ ಇಡುವುದಾದರೂ ಹೇಗೆ? ಮುಂದಾದರೂ ಮಾಧ್ಯಮ ಗಳು ಜವಾಬ್ದಾರಿಯಿಂದ ವರ್ತಿಸಿ ಮೌಲ್ಯಯುತ ಸುದ್ದಿ ಬಿತ್ತರಿಸಲಿ.

-ಸಂಜಯ್, ಮೈಸೂರು

Tags: