ಪಿರಿಯಾಪಟ್ಟಣ ತಾಲ್ಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಆತಂಕಪಡುವಂತಾಗಿದೆ.
ಈ ನಾಯಿಗಳು ಹಿಂಡುಹಿಂಡಾಗಿ ರಸ್ತೆಗಳಲ್ಲಿ ಓಡಾಡುತ್ತಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಅಲ್ಲದೆ ರಾತ್ರಿಯಾದರೆ ಸಾಕು ಗುಂಪಾಗಿ ಊಳಿಡುವ ಸದ್ದು ಜನರಿಗೆ ಕಿರಿಕಿರಿಯುಂಟುಮಾಡುತ್ತಿದೆ. ಇಲ್ಲಿ ಮಾಂಸ ದಂಗಡಿಗಳವರು ಮಾಂಸದ ತ್ಯಾಜ್ಯ ವಿಲೇವಾರಿ ಯನ್ನು ಸಮರ್ಪಕವಾಗಿ ಮಾಡದ ಪರಿಣಾಮ ಅವು ಮಾಂಸಕ್ಕಾಗಿ ರಸ್ತೆಯಲ್ಲಿಯೇ ಡುತ್ತಿರುತ್ತವೆ. ಇನ್ನು ಮಕ್ಕಳು ಶಾಲೆಗೆ ಹೋಗುವ ಹಾಗೂ ಶಾಲೆಯಿಂದ ಬರುವ ವೇಳೆ ಅವು ಮಕ್ಕಳ ಮೇಲೆ ಮೇಲೆ ದಾಳಿ ಮಾಡಿದರೆ ಯಾರು ಹೊಣೆ? ನಾಯಿಗಳು ಹಿಂಡು ಹಿಂಡಾಗಿ ಓಡಾಡುವುದರಿಂದ ಮಹಿಳೆಯರು ಮತ್ತು ಹಿರಿಯ ನಾಗರಿಕರು ಒಂಟಿಯಾಗಿ ರಸ್ತೆಗೆ ಬರಲು ಆತಂಕಪಡುವಂತಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಕ್ರಮವಹಿಸಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.
-ಎ.ಎಸ್.ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.





