ಮೈಸೂರು ಆಕಾಶವಾಣಿ ಕೇಂದ್ರದಿಂದ ಪ್ರತಿ ಭಾನುವಾರ ಬೆಳಿಗ್ಗೆ 6.35ಕ್ಕೆ ಪ್ರಸಾರವಾಗುತ್ತಿರುವ ಸಿನಿಮಾ-ಯಾನ’ ಕಾರ್ಯಕ್ರಮವು ಕನಡದ ಕಲಾತ್ಮಕ ಚಿತ್ರಗಳ ಪರಿಚಯಾತ್ಮಕ ಪ್ರಯತ್ನವಾಗಿದ್ದು, ಆಕರ್ಷಕವಾಗಿ ಮೂಡಿಬರುತ್ತಿದೆ. 3 ಗಂಟೆಗಳ ಸಿನಿಮಾ ಕಥೆಯನ್ನು ಕೇವಲ 5 ನಿಮಿಷಗಳ ಅವಧಿಯಲ್ಲಿ ಕಥೆಯ ಸಾರಾಂಶದೊಂದಿಗೆ ಹಾಡುಗಳ ತುಣುಕುಗಳನ್ನು ಹಾಕಿ ಅದ್ಭುತವಾಗಿ ಪ್ರಸ್ತುತಪಡಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿರುವ ಸಿನಿಮಾಗಳೆಲ್ಲವೂ 40-50 ವರ್ಷಗಳ ಹಿಂದಿನ ಸಿನಿಮಾಗಳಾಗಿದ್ದು, ಆ ಸಿನಿಮಾಗಳ ಉತ್ತಮ ಸಂದೇಶಗಳನ್ನು ಕಾರ್ಯಕ್ರಮದ ಮೂಲಕ ಸಮಾಜದ ಮುಂದಿಡಲಾಗುತ್ತಿದೆ. ಇದರಿಂದ ಯುವ ಪೀಳಿಗೆಗೆ ಜೀವನದ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗಿದೆ. ಆದ್ದರಿಂದ ಈ ಕಾರ್ಯಕ್ರಮ ಹೆಚ್ಚಾಗಿ ಯುವ ಸಮುದಾಯಕ್ಕೆ ತಲುಪುವಂತೆ ಮಾಡಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.