ಅಮೆರಿಕದಿಂದ ಗಡಿಪಾರು ಮಾಡಲಾದ ಅಕ್ರಮ ವಲಸಿಗರ ೨ನೇ ತಂಡ ಅಮೃತಸರಕ್ಕೆ ಬಂದಿಳಿದಿದ್ದು, ಇವರ ಕೈ ಮತ್ತು ಕಾಲುಗಳಿಗೂ ಅಮೆರಿಕ ಕೋಳ ಹಾಕಿ ಅಮಾನವೀಯವಾಗಿ ವರ್ತಿಸಿರುವುದು ಖಂಡನೀಯ.
ಅಮೆರಿಕ ದೇಶದ ಕಾನೂನು ಏನೇ ಇರಲಿ. ಜೀವನಕ್ಕಾಗಿ ಅಮೆರಿಕದಲ್ಲಿ ನೆಲಸಿದ ಭಾರ ತೀಯ ವಲಸಿಗರನ್ನು ಗೌರವ ಯುತವಾಗಿ ಕಳುಹಿಸದೆ ಅವ ರನ್ನು ಭಯೋತ್ಪಾದಕರಂತೆ ನಡೆಸಿಕೊಂಡಿರುವುದು ಅಮೆರಿಕದ ಘನತೆಗೆ ತಕ್ಕುದ್ದಲ್ಲ. ಅಮೆರಿಕದ ಈ ನಡೆಯನ್ನು ಯಾರೂ ಸಹಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಲ್ಲಿರುವಾಗಲೇ ವಲಸಿ ಗರನ್ನು ಗಡಿಪಾರು ಮಾಡಿರುವುದು ಅಕ್ಷಮ್ಯ. ಮೋದಿಯವರ ಆಪ್ತ ಮಿತ್ರರಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸಾರ್ಹ ವಾಗಿಯೇ ವಲಸಿಗರನ್ನು ಆಯಾ ದೇಶಕ್ಕೆ ಕಳುಹಿಸಬಹುದಿತ್ತು. ಅದರ ಬದಲು ಈ ರೀತಿ ಸರಪಳಿಯಿಂದ ಬಂಽಸಿ ಕಳುಹಿಸಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿರುವುದು ಅಮೆರಿಕದ ನಿಲುವಿಗೆ ಬದ್ಧವಾಗಿದೆಯೇನೋ ಎಂಬ ಅನುಮಾನ ಮೂಡಲು ಕಾರಣವಾಗಿದೆ. -ಎಸ್. ರಮಾನಂದ, ಜೆ. ಪಿ. ನಗರ, ಬೆಂಗಳೂರು.





