Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಓದುಗರ ಪತ್ರ | ಜಾತಿ ಗಣತಿ ವಿವರ ಸಲ್ಲಿಸಲು ಆನ್‌ಲೈನ್ ಅರ್ಜಿ ಕರೆಯಿರಿ

ಓದುಗರ ಪತ್ರ

ಜಾತಿ ಗಣತಿ ವರದಿ ನೋಡಿದಾಗ ಇದು ಧರ್ಮ ಗಣತಿಯೋ, ಜಾತಿ ಗಣತಿಯೋ ಎನ್ನುವುದು ತಿಳಿಯುತ್ತಿಲ್ಲ. ಹಾಗಾಗಿ ಸ್ವ ಇಚ್ಛೆಯಿಂದ ಹೇಗೆ ಆಧಾರ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಲಾಗುತ್ತಿದೆಯೋ, ಅದೇ ರೀತಿ ಆಧಾರ್ ಕಾರ್ಡ್ ಮೂಲ ದಾಖಲೆಯನ್ನಾಗಿ ಅಪ್ಲೋಡ್ ಮಾಡಿ, ಜಾತಿ ಗಣತಿ ವಿವರವನ್ನು ಸ್ವ ಇಚ್ಛೆಯಿಂದ ಜನರಿಂದ ಅನ್‌ಲೈನ್‌ನಲ್ಲಿ ಅರ್ಜಿ ಹಾಕಿ ಸಲ್ಲಿಸುವಂತೆ ಪ್ರೇರೇಪಿಸಬೇಕು.

ಅನ್‌ಲೈನ್ ನಲ್ಲಿ ಹಾಕಿದ ಅರ್ಜಿಯನ್ನು ಪರಿಶೀಲಿಸಲು ಗ್ರಾಮ ಮಟ್ಟದ ಗ್ರಾ. ಪಂ. ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಪರಿಶೀಲಿಸಿ, ಅಂಗೀಕರಿಸಬೇಕು.ನಗರ ಮಟ್ಟದಲ್ಲಿ ಸ್ಥಳೀಯ ಆಡಳಿತದಿಂದ ಪರಿಶೀಲಿಸಿ ಅಂಗೀಕರಿಸಬೇಕು.

ಇದರಿಂದ ಯಾವುದೇ ರೀತಿಯ ತೊಂದರೆ, ಅಡೆ ತಡೆ ಆಗುವುದಿಲ್ಲ. ಇಲ್ಲಿ ಜಾತಿ ಗಣತಿ ಎಂದಮೇಲೆ ಧರ್ಮ ಕಾಣಿಸಬಾರದು, ಪಂಥ ಅಥವಾ ಜಾತಿ ಎಂದು ನಮೂದಿಸಬೇಕು. ಧರ್ಮ ಹೇಗೆ ಜಾತಿ ಆಗುತ್ತದೆ? ಧರ್ಮವೇ ಬೇರೆ, ಜಾತಿಯೇ ಬೇರೆ. ಹಾಗಾಗಿ ಜನರು ಸ್ವ ಇಚ್ಛೆಯಿಂದ ಜಾತಿ ಗಣತಿ ವಿವರ ಅನ್‌ಲೈನಿನಲ್ಲಿ ಸಲ್ಲಿಸಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಅಂಗೀಕರಿಸುವಂತಹ ವ್ಯವಸ್ಥೆ ಸರ್ಕಾರ ಮಾಡಬೇಕು. -ವೀರೇಶ ಧೂಪದಮಠ

Tags:
error: Content is protected !!