ಮೈಸೂರಿನ ಕುವೆಂಪುನಗರದ ಅಕ್ಷಯ ಭಂಡಾರ್ ಸಮೀಪದ ಬಸ್ ತಂಗುದಾಣಕ್ಕೆ ಶೆಲ್ಟರ್ ಇಲ್ಲದೆ ಪ್ರಯಾಣಿಕರು ಬಿಸಿಲು, ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕಿದೆ.
ಅಕ್ಷಯ ಭಂಡಾರ್ ಕಡೆಯಿಂದ ಕಾಮಾಕ್ಷಿ ಆಸ್ಪತ್ರೆ, ಶಾರದಾದೇವಿ ನಗರ, ಬೋಗಾದಿ ೨ನೇ ಹಂತ, ಕುವೆಂಪು ನಗರ ಬಸ್ ಡಿಪೊ, ವಿವೇಕಾನಂದ ನಗರ, ಶ್ರೀರಾಮಂಪುರ, ಆಂದೋಲನ ಸರ್ಕಲ್, ದಟ್ಟಗಳ್ಳಿ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತವೆ. ಜತೆಗೆ ಅಕ್ಷಯ ಭಂಡಾರ್‌ಯಿಂದ ಮೈಸೂರು ನಗರ ಬಸ್ ನಿಲ್ದಾಣಕ್ಕೂ ಬಸ್‌ಗಳು ಸಂಚರಿಸುತ್ತವೆ. ಹೀಗಾಗಿ ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಚರಿಸುತ್ತಾರೆ. ಆದರೆ ಇಲ್ಲಿನ ಬಸ್ ನಿಲ್ದಾಣಕ್ಕೆ ಶೆಲ್ಟರ್ ಇಲ್ಲದ ಪರಿಣಾಮ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮಳೆ, ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ನಿಲ್ದಾಣಕ್ಕೆ ಶೆಲ್ಟರ್ ನಿರ್ಮಿಸಬೇಕಿದೆ.
-ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು.





