ಸಾಧನೆ
ಸೀಮಾಪುರುಷರಂತೆ
ಸೀಮಾಸೀಯರೂ
ಇದ್ದಾರೆ ಈಗ:
ದಾಖಲೆ ಲಿಖಿಸಿದ
ಭಾಮಿನಿಯರು!
ವಿಪರ್ಯಾಸ
ಕೆಟ್ಟಿಲ್ಲ ಕಾಲ
ಮೇಲಾಗಿದೆ;
ಕೆಟ್ಟಿದ್ದಾರೆ ಜನ!
(ಎಲ್ಲರೂ ಅಲ್ಲ).
ವ್ಯತ್ಯಾಸ ಪದ್ಯ
ಅರ್ಥಾತ್ ಕವನ
ಬರೆಯುವುದು ಸುಲಭ:
ಅರ್ಥವಾಗದ್ದೆ ಅದರ ಲಕ್ಷಣ;
ಗದ್ಯ ಬರೆಯುವುದು ಕಠಿಣ!
ಹೃದಯ ಹೀನರು
ಬರೆದರೆ, ಎರಡೂ ಅಧ್ವಾನ!
-ಸಿಪಿಕೆ, ಮೈಸೂರು




