Mysore
23
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಓದುಗರ ಪತ್ರ: ಸಿಎಂ ಆತ್ಮಸ್ಥೈರ್ಯ ಕುಂದಿಸಿದ ಪ್ರಕರಣ

ಇಡೀ ರಾಜ್ಯ ದಸರಾ ಸಡಗರದಲ್ಲಿ ಮುಳುಗಿಹೋಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವುದು ಅವರ ಆತ್ಮಸ್ಥೆ ರ್ಯವನ್ನು ಕುಂದುವಂತೆ ಮಾಡಿದ್ದು, ಇದರಿಂದ ಸರ್ಕಾರದ ಜಂಘಾಬಲವೇ ಅಡಗಿಹೋಗಿದೆ ಅನಿಸುತ್ತದೆ.

ಈ ಬಾರಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ರಾಜ್ಯ ಸರ್ಕಾರ ೪೦ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಮೈಸೂರಿಗೆ ಗಜಪಡೆಯ ಆಗಮನವಾಗಿದ್ದು, ಭರ್ಜರಿ ತಾಲೀಮು ನಡೆಸುತ್ತಿವೆ.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದ ಆರೋಪಿ ಸ್ಥಾನದಲ್ಲಿದ್ದು, ತನಿಖೆಯನ್ನು ಎದುರಿಸು ವಂತಾಗಿರುವುದು ದಸರಾ ಮಹೋತ್ಸವಕ್ಕೆ ಮಂಕು ಕವಿದಂತಾಗಿದೆ.

ಮುಂದಿನ ೧೫ ದಿನಗಳ ರಾಜಕೀಯ ಬೆಳವಣಿಗೆಗಳು ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಸಚಿವರು, ಶಾಸಕರು ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸಬಹುದು. ಆದರೆ ಈ ಆರೋಪ ಸಾಬೀತಾದರೆ ಸಿದ್ದರಾಮಯ್ಯನವರ ೪೦ ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯುವುದಂತೂ ಖಚಿತ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!