Mysore
24
scattered clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

ಓದುಗರ ಪತ್ರ: ಅಪ್ಪು ಅಮರ

ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಅದಾಗಲೇ ಮೂರು ವರ್ಷಗಳ ಮೇಲಾಗಿದ್ದರೂ ಅವರ ಸಮಾಜಮುಖಿ ಕೆಲಸಗಳು ಅವರನ್ನು ಇಂದಿಗೂ ಕನ್ನಡಿಗರ ಮನದಲ್ಲಿ ಜೀವಂತವಾಗಿರಿಸಿವೆ.

ಬಾಲಕನಾಗಿರುವಾಗಲೇ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಪುನೀತ್ ರಾಜ್ ಕುಮಾರ್ 12ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿಗಳಿಸಿದ ಪ್ರತಿಭಾವಂತ ನಟ. ಅಪ್ಪು, ಅಭಿ, ಮೌರ್ಯ, ಮಿಲನ, ರಾಜಕುಮಾರದಂತಹ ಕೌಟುಂಬಿಕ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸುವ ಮೂಲಕ ಜನಮನ ಗೆದ್ದ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಇಂದಿಗೂ ಹೊಂದಿದ್ದಾರೆ.

ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಲ್ಲಿ ನಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಪುನೀತ್ ರಾಜ್‌ಕುಮಾರ್‌ರವರ ಚಿತ್ರಗಳು ಎಂದರೆ ಜನರಿಗೆ ಇಂದಿಗೂ ಅಚ್ಚುಮೆಚ್ಚು. ಕನ್ನಡದ ಕೋಟ್ಯಾಧಿಪತಿ ಎಂಬ
ಜನಪ್ರಿಯ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುವ ವೇಳೆಗೆ ಅಪ್ಪು ಭಾರಿ ಪರಿಪಕ್ವಗೊಂಡು ಬಿಟ್ಟಿದ್ದರು. ಪುನೀತ್ ತಾವೆಷ್ಟೇ ದೊಡ್ಡ ನಟರಾಗಿದ್ದರು ತಂದೆ ರಾಜ್‌ಕುಮಾರ್‌ರಂತೆ ಉತ್ತಮ ಸಂಸ್ಕಾರ ಉಳ್ಳವರಾಗಿದ್ದರು. ಇಂತಹ ಅಪರೂಪದ ನಟನನ್ನು ಕಳೆದುಕೊಂಡಿದ್ದು, ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ.

-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ.

 

Tags: