ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯ ಬಳಿ ಇರುವ ರಾಜಕಾಲುವೆಗೆ ಕೆಲವರು ಪ್ರತಿನಿತ್ಯ ಕಸ ತಂದು ಸುರಿಯುತ್ತಿರುವ ಪರಿಣಾಮ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ಸೊಳ್ಳೆ, ನೊಣಗಳ ಹಾವಳಿ
ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಡಿ.ಸುಬ್ಬಯ್ಯ ರಸ್ತೆ ಸುತ್ತಮುತ್ತಲಿನ ಬಡಾವಣೆಗಳ ಕೊಳಚೆ ನೀರು ಇದೇ ರಾಜಕಾಲುವೆಯ ಮೂಲಕ ಹರಿಯುತ್ತದೆ. ಆದರೆ ಕೆಲವರು ಈ ರಾಜ ಕಾಲುವೆಗೆ ಕಸ ತಂದು ಸುರಿಯುತ್ತಿದ್ದು, ಇದರಿಂದಾಗಿ ಕಾಲುವೆ ಕಟ್ಟಿಕೊಂಡಿದೆ. ಪರಿಣಾಮ ನೀರು ನಿಂತಲ್ಲೇ ನಿಂದು ದುರ್ವಾಸನೆ ಬೀರಲಾರಂಭಿಸಿದ್ದು, ಸೊಳ್ಳೆಗಳ ಆವಾಸ
ಸ್ಥಾನವಾಗಿದೆ. ಆದ್ದರಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ರಾಜ ಕಾಲುವೆಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು.
-ಎಸ್.ಶ್ರೀದೇವಿ, ಡಿ.ಸುಬ್ಬಯ್ಯ ರಸ್ತೆ, ಮೈಸೂರು.





