ಮೈಸೂರಿನ ರಾಮಕೃಷ್ಣ ನಗರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ
(ಕಬಿನಿ ಜಲಾಶಯ ಯೋಜನೆ)ಯ ಆವರಣದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿಯೇ ಹರಡಿದೆ.
ಇತ್ತೀಚೆಗೆ ನಾನು ಜಮೀನಿನ ಕಾಗದ ಪತ್ರಗಳನ್ನು ಸಿದ್ಧಪಡಿಸಲು ಮೈಸೂರಿನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ
ಅನೈರ್ಮಲ್ಯ ವಾತಾವರಣ ಕಂಡು ಬೇಸರವಾಯಿತು. ಈ ವಾಣಿಜ್ಯ ಸಂಕೀರ್ಣ ಆಂದೋಲನ ವೃತ್ತದಿಂದ ಕೇವಲ 100 ಮೀ. ದೂರ ದಲ್ಲಿದ್ದು, ಇದರ ಎದುರೇ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದ ಣಾಧಿಕಾರಿಗಳ ಕಚೇರಿಗಳೂ ಇವೆ.
ಇಲ್ಲಿಗೆ ಬರುವ ಸಾರ್ವಜನಿಕರು ತಮ್ಮ ಕಾಗದ ಪತ್ರಗಳನ್ನು ಮುಡಾ ವಾಣಿಜ್ಯ ಸಂಕೀರ್ಣದಲ್ಲಿರುವ ಪತ್ರ ಬರಹ ಗಾರರ ಕಚೇರಿಗಳಲ್ಲಿ ಮಾಡಿಸುತ್ತಾರೆ.
ಇದರಿಂದಾಗಿ ಈ ಕಟ್ಟಡ ಸದಾ ಜನನಿಬಿಡ ಪ್ರದೇಶವಾಗಿರುತ್ತದೆ. ಇಂತಹ ಕಟ್ಟಡದ ಆವರಣದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಹರಡಿಕೊಂಡಿವೆ. ಪಾಲಿಕೆ ಕಚೇರಿಯಿಂದ ದೂರವಿರುವ ಇಂತಹ ಸ್ಥಳಗಳನ್ನು ಸ್ವಚ್ಛಗೊಳಿಸುವುದನ್ನು
ಮರೆತಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಿ ಈ ಕಟ್ಟಡದ ಸುತ್ತ ಸ್ವಚ್ಛತೆ ಕಾಪಾಡಬೇಕಿದೆ.
-ಕಾರ್ತಿಕ್, ಎಚ್.ಡಿ.ಕೋಟೆ ತಾ.





