ಬಾಲಿವುಡ್‌ನ ಜನಪ್ರಿಯ ನಟರೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಸೆಲೆಬ್ರಿಟಿಗಳಿಗೆ ಮದುವೆ ಎಂದರೆ ಮಕ್ಕಳಾಟವೇ ಎನ್ನುವಂತಾಗಿದೆ.
ಈಗಾಗಲೇ ಎರಡು ಬಾರಿ ಮದುವೆಯಾಗಿರುವ ಅವರು, ಮಕ್ಕಳನ್ನೂ ಹೊಂದಿದ್ದಾರೆ. ಅಲ್ಲದೆ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಇದು ಅವರವರ ವೈಯಕ್ತಿಕ ವಿಚಾರ ಎಂದು ಸುಮ್ಮನಾದರೂ ಇತ್ತೀಚಿನ
ದಿನಗಳಲ್ಲಿ ಮದುವೆ ಸಂಬಂಧ ಬಾಂಧವ್ಯ ಯಾಂತ್ರಿಕವಾಗುತ್ತಿದೆ.
ಕೆಲವು ಅನಿವಾರ್ಯ ಕಾರಣಗಳಿಂದ ಎರಡು ಮದುವೆಯಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಬಟ್ಟೆ ಬದಲಿಸುವಂತೆ ಮದುವೆ ಮಾಡಿಕೊಳ್ಳುವುದು ಫ್ಯಾಷನ್ ಆಗುತ್ತಿರುವುದು ವಿಪರ್ಯಾಸ.
ಅದರಲ್ಲಿಯೂ ಸಿನಿಮಾ ಮತ್ತು ಕ್ರಿಕೆಟ್ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವವರಲ್ಲಿ ಇದು ಹೆಚ್ಚಾಗುತ್ತಿದೆ. ಸಿನಿಮಾಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಇವರು ನಿಜ ಜೀವನದಲ್ಲಿ ಹೀಗೆ ಮೂರು-ನಾಲ್ಕು ಮದುವೆಗಳನ್ನಾಗುವ ಮೂಲಕ ಸಮಾಜಕ್ಕೆ ನೀಡುವ ಸಂದೇಶವಾದರೂ ಏನು?
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.





