ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದ ಕಟ್ಟಡದಲ್ಲಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ಆನ್‌ಲೈನ್ ಪಾವತಿ ಮಾಡಬೇಡಿ, ಹಣ (ಕ್ಯಾಷ್) ಕೊಡಿ ಎಂದು ಹೇಳುತ್ತಾರೆ. ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದ ಕಟ್ಟಡದಲ್ಲಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ಆನ್‌ಲೈನ್ ಪಾವತಿ ಮಾಡಬೇಡಿ, ಹಣ (ಕ್ಯಾಷ್) ಕೊಡಿ ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬೀದಿ ಬದಿಯ ವ್ಯಾಪಾರ ಮಾಡುವವರೂ ಫೋನ್ ಪೇ, ಗೂಗಲ್ ಪೇ ಹಾಗೂ ಪೆಟಿಎಂಗಳ ಮೂಲಕ ಹಣ ಪಡೆದುಕೊಳ್ಳುತ್ತಾರೆ. ಆದರೆ ಮೈಸೂರಿನಲ್ಲಿ ಕೆಲವು ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಟೆಂಡರ್ ಪಡೆದವರು ಆನ್‌ಲೈನ್ ಮೂಲಕ ಹಣ ಪಡೆಯದೇ ಬೇಜವಾ ಬ್ದಾರಿಯಿಂದ ವರ್ತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಸಾಮಾನ್ಯವಾಗಿದೆ. ಆದರೆ ಪಾರ್ಕಿಂಗ್ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅದು ತಿಳಿದಿಲ್ಲವೇ? ಹಣವನ್ನು ಆನ್‌ಲೈನ್ ಪಾವತಿ ಮಾಡಲು ಹೋದರೆ ಜಗಳವಾಡುವುಲ್ಲದೇ ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಾರ್ಕಿಂಗ್ ಗುತ್ತಿಗೆ ಪಡೆದವರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಆನ್‌ಲೈನ್ ಮೂಲಕವೂ ಹಣ ಪಡೆಯಲು ಸೂಚಿಸಬೇಕಿದೆ.
– ನಾಗೇಶ್ ಮಾನಸಗಂಗೋತ್ರಿ ಮೈಸೂರು





