Mysore
21
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಜಿ.ಡಿ.ಪಿ. ಬೆಳವಣಿಗೆ ಸುಸ್ಥಿರವಾಗಿದೆಯೇ?

ಜಾಗತಿಕ ವ್ಯಾಪಾರ ಗಣನೀುಂವಾಗಿ ಕುಸಿಯಲಿದೆ ಎಂಬುದು ಡಬ್ಲ್ಯೂಟಿಒ ಮುನ್ನೋಟ

-ಪ್ರೊ.ಆರ್.ಎಂ.ಚಿಂತಾಮಣಿ

ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯ ಇದೇ ಜುಲೈ-ಸೆಪ್ಟೆಂಬರ್ ತ್ರ್ತ್ಯೈಮಾಸಿಕದಲ್ಲಿ (ಈ ಹಣಕಾಸು ವರ್ಷದ ಎರಡನೇ ತ್ರ್ತ್ಯೈಮಾಸಿಕದಲ್ಲಿ) ಭಾರತದ ರಾಷ್ಟ್ರೀಯ ಒಟ್ಟಾದಾಯ ಶೇ.೬.೩ ಬೆಳವಣಿಗೆ ಕಂಡಿದೆ ಎಂದು ಪ್ರಕಟಿಸಿದೆ. ಇದು ರಿಸರ್ವ್ ಬ್ಯಾಂಕ್ ನಿರೀಕ್ಷೆ ಮಾಡಿದ ಮಟ್ಟದಲ್ಲಿಯೇ ಇದೆ ಎಂದು ಹೇಳಬಹುದಾದರೂ, ವಿವರಗಳನ್ನು ಪರಿಶೀಲಿಸಿದಾಗ ವಲಯ ಎಷ್ಟು ಬೆಳೆದಿದೆ ಎನ್ನುವುದು ತಿಳಿಯುತ್ತದೆ. ಬೆಳವಣಿಗೆಯ ಗತಿ ಕೋವಿಡ್-೧೯ ಪೂರ್ವದ (೨೦೧೮-೧೯)ರ ಮಟ್ಟಕ್ಕೆ ಬಂದಿರುವದು ಸಮಾಧಾನದ ವಿಷಯ. ಈ ವೇಗವಾದರೂ ಮುಂದುವರಿಯುವುದೆ?

ಕಳೆದ ವರ್ಷದ (೨೦೨೧-೨೨) ಇದೇ ತ್ರ್ತ್ಯೈಮಾಸಿಕದ ಆಧಾರದಲ್ಲಿ ಈ ತ್ರ್ತ್ಯೈಮಾಸಿಕದಲ್ಲಿ ಉತ್ಪಾದಕ ಕೈಗಾರಿಕೆಗಳು ಮತ್ತು ಗಣಿಗಾರಿಕೆ ಅನುಕ್ರಮವಾಗಿ ಶೇ.೪.೩ ಮತ್ತು ಶೇ.೨.೮ರಷ್ಟು ಹಿನ್ನಡೆ ಅನುಭವಿಸಿದೆ. ಉತ್ಪಾದನಾ ವೆಚ್ಚಗಳಲ್ಲಿಯೇ ಏರಿಕೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿಯು ಏರುಪೇರುಗಳಲ್ಲದೆ ಹಣ ದುಬ್ಬರದಿಂದ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚದಿರುವದು ಕಾರಣವೆನ್ನಲಾಗಿದೆ. ಈ ಕೊರತೆಯನ್ನು ಭರ್ತಿ ಮಾಡಿ ಶೇ.೬.೩ಕ್ಕೆ ನಿಲ್ಲುವಂತೆ ಮಾಡಿದ ಬೆಳವಣಿಗೆ ಕಂಡ ವಲಯಗಳೆಂದರೆ ಸೇವಾ ವಲಯ (ಶೇ.೯.೩), ಎಂಟು ಚಾಲಕ ಶಕ್ತಿ ಉದ್ಯಮಗಳು (ಶೇ.೫.೫), ಕೃಷಿ (ಶೇ.೪.೬) ಮತ್ತು ನಿರ್ಮಾಣ ಚಟುವಟಿಕೆಗಳು (ಶೇ.೬.೬). ಇವುಗಳಿಗೆ ಜಿಡಿಪಿ ಲೆಕ್ಕ ಹಾಕುವಾಗ ಬೇರೆ ಬೇರೆ ಮಹತ್ವ ಇರಲಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ವೇಟೇಜ್ ಬದಲಾಗುತ್ತದೆ. ಉದಾಹರಣೆಗೆ ಕೃಷಿಯನ್ನೆ ತೆಗೆದುಕೊಂಡರೆ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಸುಗ್ಗಿ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಿರುತ್ತದೆ. ಆದರೆ ಬಿತ್ತನೆ ದಿನಗಳಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕಗಳು ಮುಂತಾದ ಅವಶ್ಯಕತೆಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ.

ಕೋವಿಡ್-೧೯ ಪರಿಣಾಮ ಹೆಚ್ಚಾಗಿದ್ದ ಅವಧಿಯು ತ್ರೈಮಾಸಿಕಗಳ (೨೦೧೯-೨೦ರ ಕೊನೆುಂ ತ್ರೈಮಾಸಿಕ ೨೦೨೦-೨೧ ಇಡೀ ವರ್ಷ ಮತ್ತು ೨೦೨೧-೨೨ರ ಮೊದಲ ತ್ರೈಮಾಸಿಕ) ಆರ್ಥಿಕ ಬೆಳವಣಿಗೆ ಅಥವಾ ಕುಸಿತಗಳೊಡನೆ ಈ ವರ್ಷದ ಅಂಕಿ ಸಂಖ್ಯೆಗಳನ್ನು ಹೋಲಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಕಳೆದ ವರ್ಷದ ಇದೆ ಅವಧಿಯು ಜಿಡಿಪಿಗಿಂತ ಶೇ.೧೩.೨ಕ್ಕಿಂತ ಹೆಚ್ಚೆಂದು ದಾಖಲಾಗಿದೆ. ಆದರೆ, ಕಡಿಮೆ ಆಧಾರದಿಂದ ಬಂದ ಪರಿಣಾಮ ಎಂದು ಅದರ ಹಿಂದಿನ ವರ್ಷ ಈ ಅವಧಿಯಲ್ಲಿ ಜಿಡಿಪಿ ದೊಡ್ಡ ಪ್ರಮಾಣದಲ್ಲಿ ಕುಸಿದಿತ್ತೆಂಬುದನ್ನು ಗಮನಿಸಿದರೆ ಗೊತ್ತಾಗುತ್ತದೆ. ಸಾಮಾನ್ಯ ಸ್ಥಿತಿಯೊಡನೆ ಹೊಲಿಸಿದರೆ ಇದು ಕಡಿಮೆಯಾಗುತ್ತಿತ್ತೇನೊ.

ಈ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಇಂಗ್ಲಿಷಿನ ಕೆ (ಓ) ಅಕ್ಷರದ ಆಕಾರದಲ್ಲಿ ಆಗಿದೆ ಎಂದು ಸ್ಥೂಲವಾಗಿ ಅರ್ಥೈಸಬಹುದು. ಯಾಂಕೆಂದರೆ ಕೆಲವು ವಲಯಗಳಲ್ಲಿ ಬೆಳವಣಿಗೆ ಕಂಡಿದ್ದರೆ ಇನ್ನು ಕೆಲವು ರಂಗಗಳಲ್ಲಿ ಆಕುಂಚನವಾಗಿದೆ. ಕುಸಿತಕ್ಕೆ ಕಾರಣಗಳನ್ನು ಕಂಡು ಹಿಡಿದು ಮುಂದಿನ ದಿನಗಳಲ್ಲಿ ಸರಿಪಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಈ ಹಣಕಾಸು ವರ್ಷದ ಮೊದಲಾರ್ಧ ವರ್ಷದಲ್ಲಿ ಜಿಡಿಪಿ ಶೇ.೯.೭ ಬೆಳವಣಿಯಾಗಿದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿರುವಂತೆ ವಾರ್ಷಿಕ ಶೇ.೬.೮-೭.೦ ರಷ್ಟು ಬೆಳವಣಿಯಾಗಬೇಕಾದರೆ ಉಳಿದ ಅರ್ಧ ವರ್ಷದಲ್ಲಿ ಶೇ.೪.೪ರಿಂದ ೪.೮ರಷ್ಟಾದರೂ ಬೆಳೆಯಬೇಕು. ವಾಸ್ತವವಾಗಿ ಮೊದಲ ತ್ರೈಮಾಸಿಕದ ಕಡಿಮೆ ಆಧಾರದ ಪರಿಣಾಮಗಳನ್ನು ತೆಗೆದು ಹಾಕಿದರೆ ಇನ್ನೂ ವೇಗದಲ್ಲಿ ಬೆಳೆಯ ಬೇಕಾಗಬಹುದೇನೊ. ಸರ್ಕಾರ ಮತ್ತು ರಿಜರ್ವ್ ಬ್ಯಾಂಕ್ ಈ ವಿಷಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ.

ಇಂದಿನ ಜಾಗತಿಕ ಮತ್ತು ದೇಶದಲ್ಲಿಯ ಸ್ಥಿತಿ:
ಅಮೆರಿಕದಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಿದೆಯಾದರೂ ಯುರೋಪ್ ಮತ್ತು ಇತರ ಶ್ರೀಮಂತ ದೇಶಗಳಲ್ಲಿ ಆರ್ಥಿಕ ಹಿಂಜರಿತ ಈಗಾಗಲೇ ಕಾಲಿಟ್ಟಿದೆ. ಉಕ್ರೇನ್ ಯುದ್ಧ ಮುಂದುವರಿಯುತ್ತಿದ್ದು, ಕಚ್ಚಾ ತೈಲ ಪ್ರತಿಭಟನೆಗಳು ಮತ್ತು ಉಲ್ಬಣಿಸಿದ ಕೋವಿಡ್ ರೋಗದಿಂದಾಗಿ ಜಾಗತಿಕ ಪೂರೈಕೆ ಸರಪಳಿಯನ್ನು ಇನ್ನಷ್ಟು ಏರುಪೇರುಗಳಾಗಲಿವೆ. ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಒ) ಮುನ್ನೋಟದಂತೆ ೨೦೨೩ರಲ್ಲಿ ಜಾಗತಿಕ ವ್ಯಾಪಾರ ಗಣನೀಯವಾಗಿ ಕುಸಿಯಲಿದೆ.

ಇದರ ಪರಿಣಾಮ ನಮ್ಮ ನಿರ್ಯಾತಗಳ ಮೇಲೆ ಆಗಲಿದೆ ವಿದೇಶಿ ಬಂಡವಾಳದ ಒಳ ಹರಿವು ಕಡಿಮೆಯಾಗುವ ಭಯವಿದೆ. ನಮ್ಮ ವ್ಯಾಪಾರ ಶೇಷ ಕೊರತೆ ಇನ್ನಷ್ಟು ಹೆಚ್ಚಾಗಿ ಆತಂಕಕಾರಿಯಾದೀತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿಯ ಮೌಲ್ಯ ಒಂದು ಮಟ್ಟದಲ್ಲಿ ಸ್ಥಿರವಾಗಿ ಇರುವಂತೆ ಎಚ್ಚರವಹಿಸಲು ವಿದೇಶಿ ವಿನಿಮಯ ನಿಧಿಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯ. ಬಹುತೇಕ ದೇಶಗಳು ಹಣಕಾಸು ನೀತಿಯನ್ನು ಇನ್ನಷ್ಟು ಬಿಗಿಗೊಳಿಸಿದರೆ ನಮ್ಮ ಆಮದುಗಳು ಇನ್ನಷ್ಟು ತುಟ್ಟಿಯಾಗುವ ಆತಂಕವೂ ಇದೆ.

ಎಲ್ಲ ದೇಶಗಳಲ್ಲಿಯೂ ಇರುವಂತೆ ಹಣದುಬ್ಬರ ನಮ್ಮ ದೇಶವನ್ನೂ ಕಾಡುತ್ತಿದೆ. ಇತ್ತೀಚಿನವರೆಗೂ ಶೇ.೭.೭೧ರ ಮಟ್ಟದಲ್ಲಿಯೇ ಇದ್ದ ಹಣ ದುಬ್ಬರ ಅಕ್ಟೋಬರ್-ನವೆಂಬರ್ ಹೊತ್ತಿಗೆ ಸ್ವಲ್ಪ ಕಡಿಮೆಯಾಗಿ ಈಗ ಶೇ.೬.೭೭ಕ್ಕೆ ಇಳಿದಿದೆ. ಆದರೂ ರಿಜರ್ವ್ ಬ್ಯಾಂಕ್ ಮಿತಿಗಿಂತ ಮೇಲೆಯೇ ಇದೆ. ಈಗಾಗಲೇ ಶೇ.೭.೯೦ ರೆಪೊ ದರವನ್ನು ಹೆಚ್ಚಿಸಿದ್ದು, ಹಣಕಾಸು ನೀತಿ ಸಮಿತಿ ಈ ತಿಂಗಳು ಇನ್ನಷ್ಟು ಏರಿಸುವ ನಿರೀಕ್ಷೆ ಇದೆ. ಹೀಗೆ ಬಡ್ಡಿ ದರಗಳು ಹೆಚ್ಚುತ್ತ ಹೋದರೆ ಹೂಡಿಕೆ ವೆಚ್ಚಗಳು ಮತ್ತು ಉತ್ಪಾದನಾ ಖರ್ಚುಗಳು ಇನ್ನುಷ್ಟು ಹೆಚ್ಚಾಗಿ ಬೆಲೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಬೆಳವಣಿಗೆಗೆ ಪೆಟ್ಟು ಬೀಳಬಹುದು.

ಮಾನಸಿಕ ವರದಿಗಳಂತೆ ಉಕ್ಕು, ಸಿಮೆಂಟ್, ಗೊಬ್ಬರ, ವಿದ್ಯುತ್, ತೈಲೋದ್ಯಮ ಸೇರಿದಂತೆ ಎಂಟು ಚಾಲಕ ಶಕ್ತಿ ಉದ್ಯಮಗಳ ಅಕ್ಟೋಬರ್ ಬೆಳವಣಿಗೆ ಕೇವಲ ಶೇ.೦.೧ಕ್ಕೆ ಇಳಿದಿದೆ. ಇದು ಕಳೆದ ಇಪ್ಪತ್ತು ತಿಂಗಳಲ್ಲಿಯೇ ಅತಿ ಕಡಿಮೆ ಬೆಳವಣಿಗೆ. ಅದರಲ್ಲಿಯೂ ನಾಲ್ಕರಲ್ಲಿ ಹೆಚ್ಚು ಕುಸಿತ ಕಂಡು ಬಂದಿದ್ದು, ಉಳಿದವುಗಳಲ್ಲಿ ಅಲ್ಪ ಬೆಳವಣಿಗೆ ಕಾಣುತ್ತಿದೆ. ಇದನ್ನು ಸರಿಪಡಿಸುವ ಕಠಿಣ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಬೇಕು.

ಅದೇ ರೀತಿ ಹಿನ್ನಡೆ ಅನುಭವಿಸುತ್ತಿರುವ ಉತ್ಪಾದಕ ಕೈಗಾರಿಕೆಗಳು ಮತ್ತು ಮೈನಿಂಗ್ ವಲಯಗಳು ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಾಗಿದ್ದು, ಇದರಿಂದ ಬೆಳವಣಿಗೆ ಕುಂಠಿತವಾಗುವ ಭುಂವಿದೆ. ಸರ್ಕಾರ ಉತ್ತೇಜಕ ಕ್ರಮ ಕೈಗೊಳ್ಳಬೇಕು. ಈಗ ಕಾಣುತ್ತಿರುವ ಜಿಡಿಪಿ ಬೆಳವಣಿಗೆ ಸುಸ್ಥಿರವಾಗಬೇಕಾದರೆ ರಿಸರ್ವ್ ಬ್ಯಾಂಕು ಹಣದುಬ್ಬರ ನಿುಂಂತ್ರಿಸುವ ಭರದಲ್ಲಿ ದರಗಳನ್ನು ಹೆಚ್ಚಿಸುವುದಲ್ಲದೆ ‘ಉದಾರ ನಿಲುವನ್ನು’ ಇನ್ನಷ್ಟು ದಿನ ಮುಂದುವರಿಸಬೇಕು. ಪರಿಸ್ಥಿತಿ ಗಮನಿಸಿ ನಿಧಾನವಾಗಿ ನೀತಿ ಬಿಗಿಗೊಳಿಸಬಹುದು.

ಅದೇ ರೀತಿ ಸರ್ಕಾರವೂ ಬೆಳವಣಿಗೆ ಕಾಣುತ್ತಿದೆ ಎಂಬ ಭ್ರಮೆಯಲ್ಲಿ ಕೋಶೀಯ ಶಿಸ್ತಿನ ನೆಪದಲ್ಲಿ ವೆಚ್ಚಗಳನ್ನು ವಿಶೇಷವಾಗಿ ಹೂಡಿಕೆಗಳನ್ನು ಕಡಿಮೆ ಮಾಡಬಾರದು. ಗ್ರಾಮೀಣ ಬೇಡಿಕೆ ಹೆಚ್ಚಿಸಲು ಮತ್ತು ನಗರಗಳಲ್ಲಿ ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಭಾರತ ಈಗಿನಂತೆ ಮೊದಲ ತೀವ್ರವಾಗಿ ಬೆಳೆಯುತ್ತಿರುವ ದೇಶವಾಗಿ ಮುಂದುವರಿದು ಮೇಲ್ಮಧ್ಯಮ ದೇಶಗಳ ಗುಂಪಿಗೆ ಸೇರಬೇಕಾದರೆ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಒಮ್ಮುಖವಾಗಿ ನಡೆಯಬೇಕು.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ವೇಟೇಜ್ ಬದಲಾಗುತ್ತದೆ. ಉದಾಹರಣೆಗೆ ಕೃಷಿಯನ್ನೆ ತೆಗೆದುಕೊಂಡರೆ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಸುಗ್ಗಿ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಿರುತ್ತದೆ. ಆದರೆ ಬಿತ್ತನೆ ದಿನಗಳಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕಗಳು ಮುಂತಾದ ಅವಶ್ಯಕತೆಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ