Mysore
20
few clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಆಂದೋಲನ ಓದುಗರ ಪತ್ರ : 26 ಶನಿವಾರ 2022

ಓದುಗರ ಪತ್ರ

ಕಲ್ಲುಬೆಂಚುಗಳನ್ನು ಹಾಕಿಸಿ

ಮೈಸೂರಿನ ಕುವೆಂಪು ನಗರದ ಎನ್-ಬ್ಲಾಕ್, ಮುಖ್ಯ ರಸ್ತೆಯಲ್ಲಿರುವ ದಿ: ಹೋರಿ ಸುಬ್ಬೇಗೌಡ ಸ್ಮಾರಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯ ಒತ್ತಡದಿಂದ, ಪ್ರಯಾಣಿಕರು ‘ನಿಂತು ಕೊಂಡೇ’ ಬಸ್ ಕಾಯಾಬೇಕಾಗಿದೆ, ಕಾರಣ ಈ ಬಸ್ಸು ನಿಲ್ದಾಣದ ಪಕ್ಕದಲ್ಲೇ ಸುಮಾರು ೪೦೦ ಜನ ವಿದ್ಯಾರ್ಥಿನಿಯರ ಹಿಂದುಳಿದ ವರ್ಗಗಳ ಹಾಸ್ಟಲ್ ಇದ್ದು ಇಲ್ಲಿಂದಲೇ ವಿವಿಧ ಕಾಲೇಜಿನ ಹೋಗಬೇಕಾಗುತ್ತದೆ. ಈ ಬಸ್ಸು ನಿಲ್ದಾಣದ ಅಕ್ಕ- ಪಕ್ಕದಲ್ಲಿ ಪ್ರಯಾಣಿಕರು ಕುಳಿತು ಕೊಳ್ಳಲು ಕಲ್ಲು ಬೆಂಚುಗಳನ್ನು ಹಾಕಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡ ಬೇಕಾಗಿದೆ.

-ಬೂಕನಕೆರೆ ವಿಜೇಂದ್ರ. ಕುವೆಂಪು ನಗರ, ಮೈಸೂರು.


ವರ್ಗೀಕರಣ ಮಾಡಬೇಡಿ

ಮೈಸೂರಿನಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಣಂದೂರು ಲಿಂಗಪ್ಪ ನವರು ಕನ್ನಡದ ಚಳುವಳಿ ಬಗ್ಗೆ ಮಾತನಾಡುತ್ತಾ ಕೆಲವು ಹಿರಿಯರ ಹೆಸರನ್ನು ಪ್ರಸ್ತಾಪಿಸಿ ಅವರುಗಳ ಹೋರಾಟವನ್ನು ಸ್ಮರಿಸಿದರು. ಕನ್ನಡಕ್ಕಾಗಿ ಹೋರಾಟ ಮಾಡಿದವರೆಲ್ಲರೂ ಸ್ಮರಣೀಯರೆ. ಆದರೆ ಈ ಹೋರಾಟದಲ್ಲಿ ವಾಟಾಳ್ ನಾಗರಾಜ್ ರವರ ಹೋರಾಟವನ್ನು ಸ್ಮರಿಸದಿದ್ದುದು ಬಹುಶಃ ಅವರೊಬ್ಬ ಶೈಕ್ಷಣಿಕ ವ್ಯಕ್ತಿ ಅಲ್ಲವೆಂಬ ಕಾರಣಕ್ಕೋ ಅಥವಾ ಆತನೊಬ್ಬ ಬೀದಿಬದಿಯಹೋರಾಟಗಾರನೆಂಬ ಅಸಡ್ಡೆಯೋ ತಿಳಿಯದು. ಹಾಗೆಯೇ ಗೋಕಾಕ್ ಚಳುವಳಿಯ ನಾಯಕತ್ವ ವಹಿಸಿದ್ದ ಡಾ,ರಾಜಕುಮಾರ್‌ರವರೂ ಕೂಡ. ಕನ್ನಡದ ಬಗ್ಗೆ ಮಾತನಾಡುವಾಗ ಹೋರಾಟದ ನೇತೃತ್ವ ವಹಿಸಿದ್ದ ಎಲ್ಲರನ್ನೂ ಸ್ಮರಿಸುವುದು ಕರ್ತವ್ಯ, ಅಲ್ಲಿ ವರ್ಗೀಕರಣ ಮಾಡಬಾರದೆಂಬುದೇ ಆಗ್ರಹ ಮತ್ತು ಆಶಯ.

-ಬ್ಯಾಂಕ್ ಶಿವಕುಮಾರ, ಜೆ ಪಿ ನಗರ, ಮೈಸೂರು.


ಹುದ್ದೆ ಸಂಖ್ಯೆ ಹೆಚ್ಚಿಸಲಿ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್-ಎ ಮತ್ತು ಬಿ ವೃಂದದ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ಪ್ರಸ್ತುತ ೩೫೦ ಹುದ್ದೆಗಳು ಗ್ರೂಪ್-ಎ ಮತ್ತು ಗ್ರೂಪ್-ಬಿ, ಹುದ್ದೆಗಳು ಖಾಲಿಯಿರುತ್ತವೆ. ಆದರೆ ಕರ್ನಾಟಕ ಲೋಕಸೇವ ಆಯೋಗವು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಕೇವಲ-೪೩ ಹುದ್ದೆಗಳಿಗೆ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ತಯಾರಿ ನಡೆಸುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಕಳೆದ ೩ ವರ್ಷಗಳಿಂದ ಕೋರಾನ ಎಂಬ ಸಾಂಕ್ರಾಮಿಕ ರೋಗದಿಂದ ನೂರಾರು ಕೆ.ಎ.ಎಸ್.ಅಭ್ಯರ್ಥಿಗಳು ೨೦೧೭-೧೮ನೇ ಸಾಲಿನ ಕೆಎಎಸ್ ಪರೀಕ್ಷೆ ಬರೆಯಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಪ್ರಸ್ತುತ ಗ್ರೂಪ್-ಎ ಮತ್ತು ಗ್ರೂಪ್- ಬಿ ವೃಂದದ ಕೇವಲ ೪೩ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದರಿಂದ ಸಾವಿರಾರು ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿ ಮನವಿ.

-ಕಾಂತರಾಜು ತುಮಕೂರು, ಮೈಸೂರು


ಜಾಕಿರನನ್ನು ಅರಬ್ ರಾಷ್ಟ್ರಗಳೇ ಬಂಧಿಸಲಿ

ಧರ್ಮ ಪ್ರಚಾರದ ಹೆಸರಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಜಾಕಿರ್ ನಾಯಕನನ್ನು ಅರಬಿ ರಾಷ್ಟ್ರಗಳೇ ಬಂಧಿಸ ಬೇಕು ಇಲ್ಲವಾದಲ್ಲಿ ಇಡೀ ಮಾನವ ಕುಲಕ್ಕೆ ಇವನು ಅಪಾಯ ಉಂಟುಮಾಡುವಲ್ಲಿ ಎರಡು ಮಾತಿಲ್ಲ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ಆಟ ವೀಕ್ಷಿಸಲು ವಿವಿಧ ರಾಷ್ಟ್ರಗಳಿಂದ ಬರುವ ಅನ್ಯ ಧರ್ಮದ ಜನತೆಗೆ ಬೋಧನೆ ಮಾಡಲು ಜಾಕಿರ್ ನಾಯಕನನ್ನು ಕತಾರ್ ಆಹ್ವಾನಿಸಿದ್ದು ದುರಾದೃಷ್ಟ ಸರಿ. ಇವನು ಬರಿ ಭಾರತಕ್ಕೆ ಅಷ್ಟೇ ಅಲ್ಲಾ ಎಲ್ಲಾ ಮುಂದುವರೆದ ರಾಷ್ಟ್ರಗಳಿಗೆ ಮಾರಕ. ಇವನು ಜಗತ್ತಿನಾದ್ಯಂತ ಧರ್ಮದ ಹೆಸರಲ್ಲಿ ಮುಗ್ಧ ಮನಸುಗಳ ಮೇಲೆ ಉಗ್ರವಾದಕ್ಕೇ ಕುಮ್ಮಕು ಕೊಟ್ಟಿರುವ ಬಗ್ಗೆ ಸಾಕ್ಷ್ಯಗಳಿವೆ. ಇವನು ಇತ್ತೀಚಿಗೆ ಪಾಕಿಸ್ತಾನದ ಅಲ್ ಕೈದಾ ಮತ್ತು ಐಸಿಸ್ ಜೊತೆಗೆ ಒಡನಾಟ ಹೊಂದಿರುವುದನ್ನು ಪಾಕಿಸ್ತಾನದ ಕೆಲ ಮಾಧ್ಯಮಗಳು ಖಚಿತಪಡಿಸಿವೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಪಾಕಿಸ್ತಾನದ ಇಮ್ರಾನ್ ಖಾನ್‌ನ ಕೊಲೆಗೆ ಸಂಚು ರೂಪಿಸಿದ್ದ ಮಾಹಿತಿ ಅಲ್ಲಿನ ಮಾಧ್ಯಮಗಳೇ ವರದಿ ಮಾಡಿವೆ.

-ವಿಜಯಕುಮಾರ್ ಎಚ್.ಕೆ. ಮೈಸೂರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!