Mysore
18
clear sky

Social Media

ಮಂಗಳವಾರ, 06 ಜನವರಿ 2026
Light
Dark

ಆಂದೋಲನ ಓದುಗರ ಪತ್ರ : 30 ಶುಕ್ರವಾರ 2022

ಮತ್ತೊಂದು ಆಕ್ಸಿಜನ್ ದುರಂತಕ್ಕೆ ಆಸ್ಪದವಾಗದಿರಲಿ

ಕೋವಿಡ್- ೧೯ ೨ನೇ ಅಲೆಯ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಗದ ಪರಿಣಾಮ ೩೬ ಮಂದಿ ಕೊರೊನಾ ಸೋಂಕಿತರು ಜೀವ ಕಳೆದುಕೊಂಡಿದ್ದು, ದೇಶದ ದುರಂತಗಳಲ್ಲಿ ಒಂದಾಗಿದೆ. ಆ ವೇಳೆ ಘಟನೆಯ ಜವಾಬ್ದಾರಿ ಹೊರದ ಅಽಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಲು ಮುಂದಾಗಿದ್ದರು. ಆದರೆ ಒಟ್ಟಾರೆ ಅಽಕಾರಿಗಳ ನಿರ್ಲಕ್ಷ್ಯದಿಂದ ದುರಂತ ನಡೆದಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಈಗ ಮತ್ತೆ ಕೋವಿಡ್‌ನ ಉಪತಳಿ ಬಿಎಫ್೭ರ ಭೀತಿ ದೇಶಕ್ಕೆ ಎದುರಾಗಿದೆ. ನಮ್ಮ ರಾಜ್ಯದ ಎಲ್ಲ್ಲ ಆಸ್ಪತ್ರೆಗಳಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕಿದೆ. ಈಗಾಗಲೇ ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಸಾಕಷ್ಟು ಪ್ರಮಾಣದ ಆಕ್ಸಿಜನ್ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಮೈಸೂರಿನಲ್ಲಿಯೂ ಕೆ.ಆರ್.ಆಸ್ಪತ್ರೆ ಸೇರಿದಂತೆ ೧೫ ಆಕ್ಸಿಜನ್ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುರುವುದು ತುಸು ನೆಮ್ಮದಿಯ ವಿಚಾರ. ಎಲ್ಲಾ ಜಿಲ್ಲಾಽಕಾರಿಗಳು ಪರಸ್ಪರ ಸಮನ್ವಯದಿಂದ ತಮ್ಮ ಸೇವೆಯನ್ನು ಮುಂದುವರಿಸಿ ಈ ಬಾರಿ ಕೋವಿಡ್‌ನಿಂದ ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಬೇಕಿದೆ. ಸಾರ್ವಜನಿಕರು (ಅರ್ಹರು) ಕೂಡ ಬೂಸ್ಟರ್ ಡೋಸ್ ಪಡೆದು, ಕೋವಿಡ್ ತಡೆಗೆ ಕೈಜೋಡಿಸಬೇಕು.

ದಿವ್ಯಶ್ರೀ ದಾಸ್, ಮಾನಸಗಂಗೋತ್ರಿ, ಮೈಸೂರು.


ಡಾ.ಸರೋಜಿನಿ ಮಹಿಷಿ ಪರಿಷ್ಕ ತ ವರದಿ ಜಾರಿ ಯಾವಾಗ

ಡಾ.ಸರೋಜಿನಿ ಮಹಿಷಿ ಪರಿಷ್ಕ ತ ವರದಿಯನ್ನು ಇದುವರೆಗೂ ಸರ್ಕಾರ ಜಾರಿಗೆ ತರದೇ ಇರುವುದು ಬೇಸರದ ಸಂಗತಿಯಾಗಿದೆ. ಅಽಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೀನಮೇಷ ಎಣಿಸುತ್ತಿವೆ. ಮಹಿಷಿ ಅವರ ವರದಿ ಪ್ರಕಾರ ರಾಜ್ಯದಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಉದ್ಯಮಗಳು, ವಾಣಿಜ್ಯ ಸಂಸ್ಥೆಗಳು, ಐಟಿ-ಬಿಟಿ ಕ್ಷೇತ್ರದ ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇ.೧೦೦ ರಷ್ಟು ಮೀಸಲಾತಿ ನೀಡಬೇಕು ಮತ್ತು ಶೇ.೮೦ ರಷ್ಟು ಉನ್ನತ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಬೇಕು. ಕನ್ನಡ ಅಭಿವೃದ್ಧಿ ಪ್ರಾಽಕಾರ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಪರಿಷ್ಕ ತ ವರದಿಗೆ ಕಾನೂನು ರೂಪ ನೀಡುವ ಮೂಲಕ ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿರುವುದು ಶ್ಲಾಘನೀಯ. ಆದರೆ, ಸರ್ಕಾರಗಳು ಮಾತ್ರ ಈ ವರದಿಯನ್ನು ಜಾರಿ ಮಾಡಲು ಆಸಕ್ತಿ ತೋರಿಸದಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಈಗಲಾದರೂ ಸರ್ಕಾರವು ಡಾ.ಸರೋಜಿನಿ ಮಹಿಷಿ ಪರಿಷ್ಕ ತ ವರದಿಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು.

ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!