Mysore
21
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಆಂದೋಲನ ಓದುಗರ ಪತ್ರ : 27 ಮಂಗಳವಾರ 2022

ನಾಡಗೀತೆಗೆ ಕಾಲಮಿತಿ ನಿಗದಿ
ನಾಡಗೀತೆ ಗಾಯನಕ್ಕೆ ಧಾಟಿ ಮತ್ತು ೨.೩೦ ನಿಮಿಷ ಕಾಲಮಿತಿಯನ್ನು ನಿಗದಿಪಡಿಸಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯನ್ನು ಅಧಿಕೃತಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಅನಂತ ಧನ್ಯವಾದಗಳು.
ಮೈಸೂರು ರಾಜ್ಯವಿದ್ದಾಗ ಬಸಪ್ಪಶಾಸ್ತ್ರಿಗಳು ರಚಿಸಿದ ಕಾಯೌ ಶ್ರೀ ಗೌರಿ ನಾಡಗೀತೆಯಾಗಿ ಎಲ್ಲೆಡೆ ಹಾಡಲಾಗುತ್ತಿತ್ತು, ನಂತರ ಕರ್ನಾಟಕ ರಾಜ್ಯ ರಚನೆಯಾದ ಬಳಿಕ ಕುವೆಂಪುರವರು ರಚಿಸಿದ ಭಾರತ ಜನನೀಯ ತನುಜಾತೆ ಹಾಡುತ್ತಿದ್ದದರೂ ಅದನ್ನು ಅಧಿಕೃತವಾಗಿ ನಾಡಗೀತೆಯೆಂದು ಘೋಷಿಸಿರಲಿಲ್ಲ. ೨೦೦೪ ಫೆಬ್ರವರಿ ೨೩ರಂದು ಕುವೆಂಪುರವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಭಾರತ ಜನನಿಯ ತನುಜಾತೆ ಗೀತೆಯನ್ನು ರಾಜ್ಯದ ಅಧಿಕೃತ ನಾಡಗೀತೆಯನ್ನಾಗಿ ಘೋಷಿಸಿತು. ಇದೀಗ ಸಂಗೀತ ವಿದುಷಿ ಎಚ್.ಆರ್.ಲೀಲಾವತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಶಿಫಾರಸು ಮಾಡಿದ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ಸಾಂಸ್ಕೃತಿಕ ವೇದಿಕೆಗಳಲ್ಲಿ’ ಶಾಲಾ ಕಾಲೇಜುಗಳಲ್ಲಿ ಹಾಡುವಾಗ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಂತೆ ೨.೩೦ ನಿಮಿಷಗಳ ಕಾಲಾವಧಿಯಲ್ಲಿ ನಾಡಗೀತೆಯನ್ನು ಹಾಡಬೇಕೆಂದು ಅಧಿಕೃತಗೊಳಿಸಿದೆ. ಇದು ನಮ್ಮ ಮೈಸೂರಿನ ಸಾಂಸ್ಕೃತಿಕತೆಗೆ ಕಲಾವಿದರ ತವರೂರಿಗೆ ಸಂದ ಗೌರವವಾಗಿದೆ, ಮೈಸೂರು ಕಲಾವಿದರ ಬಹಳ ವರ್ಷದ ಮಹದಾಸೆ ಈಡೇರಿದೆ. ನಿರ್ಧಾರ ಕೈಗೊಂಡು ಅನುಮೋದನೆ ಮಾಡಿದ ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಅನಂತ ಧನ್ಯವಾದಗಳು.
ಅಜಯ್ ಶಾಸ್ತ್ರಿ, ನಿರೂಪಕ ಹಾಗೂ
ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ