ಚುಟುಕು ಮಾಹಿತಿ
ಆಹಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ೨೦೨೨-೨೩ನೇ ಸಾಲಿನ ಖಾರಿಫ್ ಋತುವಿನಲ್ಲಿ ಅಕ್ಟೋಬರ್ ಅಂತ್ಯದವರೆಗೆ ಕೇಂದ್ರ ಸರ್ಕಾರ ಸಂಗ್ರಹಿಸಿರುವ ಭತ್ತದ ಪ್ರಮಾಣವು ೧೭೦.೫೩ ಲಕ್ಷ ಟನ್‌ಗಳಿಗೆ ಏರಿದ್ದು, ಶೇ.೧೨ರಷ್ಟು ಹೆಚ್ಚಳವಾಗಿದೆ. ಪಂಜಾಬ್, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಖರೀದಿಸಲಾಗಿದೆ.





