ಮೈಸೂರು: ಶಾಸಕ ಬಿ.ಹರ್ಷವರ್ಧನ್ ಮೈಸೂರು ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ‘ಕಪ್ಪು ಚಿರತೆ’ ಅನ್ನು ದತ್ತು ಸ್ವೀಕಾರಿಸಿದ್ದಾರೆ.
ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ಕೈ ಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ ಶಾಸಕ ಹರ್ಷವರ್ಧನ್ ಅವರಿಗೆ ಶ್ರೀ ಚಾಮರಾಜೇಂದ್ರ ಮೃಗಾಲಯವು ವಂದಿಸಿದೆ. ಪ್ರಾಣಿ ಸಂರಕ್ಷಣೆಯ ಸತ್ಕಾರ್ಯಕ್ಕೆ ಅವರು ನೀಡಿರುವ ಮಹತ್ತರ ಬೆಂಬಲ ಇದಾಗಿದ್ದು, ಅವರ ಈ ಕಾರ್ಯ ಇತರೆ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಪ್ರೇರಕವಾಗಿದೆ. ಮೃಗಾಲಯದ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವುಗಳ ಸಂರಕ್ಷಣೆಗೆ ವಿಶೇಷ ಒಲವಿನಿಂದ ತಮ್ಮ ಬೆಂಬಲವನ್ನು ನೀಡಿರುವ ಬಿ.ಹರ್ಷವರ್ಧನ್ ಅವರಿಗೆ ಮೃಗಾಲಯವೂ ಅಭಿನಂದನೆ ಸಲ್ಲಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.