Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮೈಸೂರಿನ ಜನತೆಗೆ ನಾವು ಆಭಾರಿ: ಪ್ರಹ್ಲಾದ್‌ ಮೋದಿ

ಕಾರು ಅಪಘಾತಕ್ಕೊಳಗಾಗಿ ಚೇತರಿಸಿಕೊಂಡ ಪ್ರಧಾನಿ ಮೋದಿ ಸಹೋದರನ ಪ್ರತಿಕ್ರಿಯೆ

ಮೈಸೂರು: ಇಲ್ಲಿನ ಜನತೆ ಕಮಾಂಡೋಗಳ ರೀತಿಯಲ್ಲಿ ಬಂದು ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ಇಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದರು. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದವರೂ ಸಹ ಬಂದು ಧೈರ್ಯ ತುಂಬಿದ್ದಾರೆ. ಮೈಸೂರಿನ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರ ನುಡಿ. ಕಾರು ಅಪಘಾತವಾದ ತಕ್ಷಣ ನಮ್ಮನ್ನು ಆಸ್ಪತ್ರೆಗೆ ಸೇರಿಸಲು ಕಾಳಜಿ ತೋರಿದ ಮೈಸೂರಿನ ಜನತೆಗೆ ಆಭಾರಿ ಎಂದು ಅವರು ಧನ್ಯವಾದ ಸಲ್ಲಿಸಿದರು.

ಪ್ರಹ್ಲಾದ್ ಮೋದಿ ಮತ್ತು ಕುಟುಂಬಸ್ಥರು ಸಂಚರಿಸುತ್ತಿದ್ದ ಕಾರು ಮಂಗಳವಾರ ಮೈಸೂರಿನ ಕಡಕೋಳ ಬಳಿ ಅಪಘಾತಕ್ಕೀಡಾಗಿ ಐವರು ಆಸ್ಪತ್ರೆಗೆ ದಾಖಲಾಗಿದ್ದರು. ಜೆಎಸ್‌ ಎಸ್‌ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಘಾತದಲ್ಲಿ ಚಾಲಕನದ್ದು ತಪ್ಪಿಲ್ಲ. ಈ ಕಾರು ನನ್ನ ಸ್ನೇಹಿತ ರಾಜಶೇಖರ್ ಅವರಿಗೆ ಸೇರಿದ್ದು. ನಾನು ಇಲ್ಲಿಗೆ ಬಂದಾಗ ಅವರ ಕಾರನ್ನೇ ಉಪಯೋಗಿಸಿಕೊಳ್ಳುತ್ತಿದ್ದೆ. ನಿನ್ನೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಕಾರ್‌ ನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದು, ನಾವೆಲ್ಲ ಸುರಕ್ಷಿತವಾಗಿದ್ದೇ ವೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯದೊತ್ತಡಗಳ ನಡುವೆಯೂ ನಮಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಾವು ಚೆನ್ನಾಗಿದ್ದೇ ವೆ ಎಂದು ತಿಳಿಸಿದ್ದೇವೆ ಎಂದರು. ಬೆಂಗಳೂರಿನ ನಮ್ಮ ಸ್ನೇ ಹಿತನ ಎರಡು ಕಾರಿನಲ್ಲಿ ನಾನು ಮತ್ತು ನನ್ನ ಕುಟುಂಬದವರು ಬಂಡೀಪುರಕ್ಕೆ ಹೊರಟಿದ್ದೆವು.ನಾವಿದ್ದ ಕಾರಿನಲ್ಲಿ ಮಗ ಮೇಹುಲ್ ಪ್ರಹ್ಲಾದ್ ಮೋದಿ(40) ಮತ್ತು ಸೊಸೆ ಜಿಂದಾಲ್ ಮೋದಿ (35), ಮೊಮ್ಮಗ ಮೇನಥ್ ಮೇಹುಲ್ ಮೋದಿ (6), ಡ್ರೈವರ್ ಸತ್ಯನಾರಾಯಣ(46) ಸೇರಿ ಐದು ಜನರಿದ್ದೆವು. ಎಲ್ಲರೂ ಈಗ ಚೇತರಿಸಿಕೊಂಡಿದ್ದೇವೆ ಎಂದರು.

ಕರ್ನಾಟಕದಲ್ಲೂ ನಮ್ಮ ಪರಿವಾರ..

ಮಂಗಳವಾರ ಅಪಘಾ ತ ಆದ ನಂತರ ಎಲ್ಲರೂ ನಮಗೆ ಸ್ಪಂದಿಸಿದ ರೀತಿ ನೋಡಿದರೆ ಕರ್ನಾಟಕದಲ್ಲೂ ಕೂಡ ನಮಗೆ ಬಂಧು, ಬಳಗ ಇದೆ ಎಂಬ ಭಾವನೆ ಉಂಟಾಗಿದೆ. ಪ್ರಧಾನಿ ಮೋದಿ ಅವರು ಬ್ಯುಸಿ ಇರುತ್ತಾರೆ. ಆದರೂ ಸಹ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಾವು ಚೆನ್ನಾಗಿದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಗುಜರಾತಿಗೆ ಮರಳುತ್ತೇವೆ ಎಂದು ಪ್ರಹ್ಲಾದ್ ಮೋದಿ ತಿಳಿಸಿದರು. ಶಾಸಕ ರಾಮದಾಸ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!