Mysore
27
scattered clouds

Social Media

ಮಂಗಳವಾರ, 24 ಡಿಸೆಂಬರ್ 2024
Light
Dark

ಕಸ ಬಿಸಾಡುತ್ತಿದ್ದವರಿಗೆ ರಂಗೋಲಿ ಅಲಂಕಾರದ ಮದ್ದು, ವಾರ್ಡ್ ಸ್ವಚ್ಚತೆ ಮನವಿ

ಮೈಸೂರು : ವಾರ್ಡ್ ನಂಬರ್ 49ರ ಲಕ್ಷ್ಮಿಪುರಂ ಭಾಗದ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಭಾಭವನದ ಪಕ್ಕದ ಲಕ್ಷ್ಮಿಪುರಂ 2ನೇ ಕ್ರಾಸ್ ನಲ್ಲಿ ಸತತವಾಗಿ ಸಾರ್ವಜನಿಕರು ಕಸವನ್ನು ಬಿಸಾಡುತ್ತಿದ್ದುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದ ಕಾರಣ ಇಂದು ಶಾಸಕರಾದ ಎಸ್ಎ ರಾಮದಾಸ್ ರವರ ಆದೇಶದ ಮೇರೆಗೆ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ನಗರ ಪಾಲಿಕೆಯ ಪೌರಕಾರ್ಮಿಕರ ತಂಡವು ಕಸವನ್ನು ಬಿಸಾಡಿರುವ ಸ್ಥಳಗಳಲ್ಲಿ ರಂಗೋಲಿ ಹಾಕುವ ಮೂಲಕ ಸ್ಷಚ್ಚತೆಯ ಬಗ್ಗೆ ಅರಿವು ಮೂಡಿಸಲಾಯಿತು.
ವಿವಿಧ ಪ್ರದೇಶಗಳಲಿದ್ದ ಕಸವನ್ನು ತೆರವುಗೊಳಿಸಿ ಅಲ್ಲಿ ರಂಗೋಲಿ ಹಾಕಿ ಅಲಂಕಾರವನ್ನು ಮಾಡುವ ಮೂಲಕ ಕಸ ಹಾಕಲು ಬರುವವರಿಗೆ ಗುಲಾಬಿ ಹೂನೀಡುವ ಮೂಲಕ ಸ್ವಚ್ಛತೆಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಯಿತು.

ಬಳಿಕ  ಪೌರಕಾರ್ಮಿಕರು ಸಂಪೂರ್ಣ ಕಸದ ರಾಶಿಯನ್ನು ತೆಗೆದು ಒಳಚರಂಡಿ ಕಾರ್ಮಿಕರ ಜಟ್ಟಿಂಗ್ ವಾಹನದ ಮೂಲಕ ರಸ್ತೆಗೆ ನೀರನ್ನು ಸಿಂಪಡಿಸಿ ಗ್ಯಾಂಗ್ ಮ್ಯಾನ್ ಕಾರ್ಮಿಕರಿಂದ ಅಲ್ಲಿದ್ದ ಹಲವು ಗುಡ್ಡೆ ಮಣ್ಣುಗಳನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್ ರವರು, ನಗರಪಾಲಿಕೆ ಆರೋಗ್ಯ ಪರಿವೀಕ್ಷಕರಾದ ಪ್ರೀತಿ ಮತ್ತು ತಂಡ, ಒಳಚರಂಡಿ ಅಭಿಯಂತರರಾದ ಅರಸೇಗೌಡರು ಮತ್ತು ‌ತಂಡ, ವಾಟರ್ ಇನ್ಸ್ಪೆಕ್ಟರ್ ಮಧುರವರು, ವರ್ಕ್ ಇನ್ಸ್ಪೆಕ್ಟರ್ ಮಧು ಮತ್ತು ತಂಡದ ಮುಂತಾದವರು ಇಂದಿನ ಸ್ವಚ್ಛತೆಗೆ ಸಂಪೂರ್ಣ ಸಹಕರಿಸಿದರು.

ಇದರ ಜೊತೆಗೆ  ವಿಶೇಷವಾಗಿ ಇಂದಿನಿಂದ ರಾತ್ರಿ 9:00 ಯಿಂದ11 ಗಂಟೆಯವರೆಗೆ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ವಾರ್ಡಿನ ಪೌರಕಾರ್ಮಿಕ ಮೇಸ್ತ್ರಿಗಳು ಸ್ಥಳಕ್ಕೆ ಹಾಜರಾಗಿ ಈ ಭಾಗದಲ್ಲಿ ಕಸ ಹಾಕಲು ಬರುವ ಸಾರ್ವಜನಿಕರಿಗೆ ಕಸ ಹಾಕದಂತೆ ತಿಳಿಸಲಾಗುತ್ತದೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ