Mysore
26
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಿ : ಶಾಸಕ ಆರ್ ನರೇಂದ್ರ

ಹನೂರು: ವಿಶ್ವಕರ್ಮ ಸಮುದಾಯದ ಜನತೆ ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಶಾಸಕ ಆರ್ ನರೇಂದ್ರ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಪ್ರತಿಮೆಯನ್ನೋಳಗೊಂಡ ಒಳಗೊಂಡ ಅಶ್ವರೂಢ ವಾಹನಕ್ಕೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಶಿಲ್ಪಕಲೆಯಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮನ್ನಣೆ ಮಾಡಿದ ಕೀರ್ತಿ ವಿಶ್ವಕರ್ಮ ಸಮುದಾಯಕ್ಕೆ ಸಲ್ಲುತ್ತದೆ. ಇತ್ತೀಚಿಗೆ ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಿರುವುದು ಸಂತಸ ತಂದಿದೆ ಎಂದರು.ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ ಎಂದು ಕರೆ ನೀಡಿದರು.

ಮೆರವಣಿಗೆಗೆ ಮೆರಗು ತಂದ ಸಾಂಸ್ಕೃತಿಕ ಕಲಾ ತಂಡಗಳು: ರಾಷ್ಟ್ರೀಯ ಹಬ್ಬಗಳ ಆಚರಣಾ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತಿ ಮೆರವಣಿಗೆ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದವು.

ಪಟ್ಟಣದ ಆರ್.ಎಸ್.ದೊಡ್ಡಿಯಿಂದ ಹೊರಟ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ದಿ. ಹೆಚ್.ನಾಗಪ್ಪ ವೃತ್ತದ ಮೂಲಕ ಸಾಗಿ ಬಂಡಳ್ಳಿ ರಸ್ತೆ ಕ್ರಿಸ್ತರಾಜ ಶಾಲೆವರೆಗೆ ವಿವಿಧ ತಾಳ ಮೇಳಗಳೊಂದಿಗೆ ಸಾಗಿತು.

ಈ ಸಂದರ್ಭದಲ್ಲಿ ವಿಶ್ವಕರ್ಮ ತಾಲೂಕು ಸಂಘದ ಅಧ್ಯಕ್ಷ ಮುತ್ತುರಾಜು, ಖಜಾಂಚಿ ಸಿದ್ದರಾಜು, ಸಮುದಾಯದ ಮುಖಂಡರಾದ ತಮ್ಮಯ್ಯ ಚಾರ್, ಶಿವಮೂರ್ತಿ, ಮುರುಗೇಶ್, ಕುಮಾರ ಹಾಗೂ ವಿವಿಧ ಗ್ರಾಮಗಳ ಮುಖಂಡರುಗಳು, ಯಜಮಾನರುಗಳು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!