ಹನೂರು: ನಾಡ ಬಂದೂಕು ಮತ್ತು ಹೈ ಫ್ರೆಶರ್ ಏರ್ ಗನ್ ಹಿಡಿದು ಕಾಡೊಳಗೆ ಓಡಾಡಿದ್ದ ಮೂವರನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆಲಂಬಾಡಿ ಬಳಿ ನಡೆದಿದೆ.
ತಾಲೂಕಿನ ಹೊಗೆನಕಲ್ ಗ್ರಾಮದ ಮಾರಿಮುತ್ತು, ನಲ್ಲಾಂಪಟ್ಟಿ ಗ್ರಾಮದ ಕವಿನ್ ಕುಮಾರ್ , ವಿಘ್ನೇಶ್ ಎಂಬುವರು ಬಂಧಿತ ಆರೋಪಿಗಳು.
ಘಟನೆ ವಿವರ: ಗೋಪಿನಾಥಂ ಬಳಿಯ ಆಲಂಬಾಡಿ ಸಮೀಪದ ಅಕ್ರಮವಾಗಿ ಇವರು ಗನ್ ಗಳೊಟ್ಟಿಗೆ ಕಾಡು ಪ್ರವೇಶಿಸಿ ಓಡಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ಬಂಧಿತರಲ್ಲಿ ಓರ್ವ ವೈದ್ಯನಿದ್ದಾನೆ ಎಂದು ಮೂಲಗಳು ತಿಳಿಸಿದ್ದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಸದ್ಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.





