ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯೊಬ್ಬಳು ತಾಯಿಯೊಬ್ಬಳು ಹಿಡಿದುಕೊಳ್ಳಲು ಕೊಟ್ಟ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಿ ನರಸೀಪುರ ತಾಲೂಕಿ ವಡ್ಡರಕೊಪ್ಪಲಿನ ಶಿವಕುಮಾರ್ ಅವರ ಪತ್ನಿ ಸವಿತಾ ಎಂಬುವವರು ಮಗು ಕಳೆದುಕೊಂಡಿದ್ದಾರೆ.
ನಿನ್ನೆ ( ಜನವರಿ 8 ) ಚನ್ನಪಟ್ಟಣದಿಂದ ತಿ ನರಸೀಪುರಕ್ಕೆ ಮಗುವಿನ ಜತೆ ತೆರಳುತ್ತಿದ್ದ ಸವಿತಾ ಜನಸಂದಣಿಯಿದ್ದ ಕಾರಣ ಸೀಟ್‌ನಲ್ಲಿ ಕುಳಿತಿದ್ದ ಅಪರಿಚಿತ ಮಹಿಳೆಯೊಬ್ಬರಿಗೆ ತನ್ನ ಮಗುವನ್ನು ನೀಡಿದ್ದಾರೆ. ಇನ್ನು ಸವಿತಾ ಮಳವಳ್ಳಿಯಲ್ಲಿ ಇಳಿದು ಬಸ್ ಬದಲಿಸಲು ಮುಂದಾದಾಗ ಆಕೆಯೂ ಸಹ ಇಳಿಯುವ ನಾಟಕವಾಡಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಮಗು ಕಾಣದೇ ಕಂಗಾಲಾದ ಸವಿತಾ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ್ದಾರೆ. ಮಾಹಿತಿ ಪಡೆದುಕೊಂಡ ಪಟ್ಟಣ ಪೊಲೀಸರು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.