Mysore
20
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಕತ್ತಿಯವರ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ : ಶಾಸಕ ಆರ್. ನರೇಂದ್ರ

ಹನೂರು: ಕಳೆದ ತಿಂಗಳು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ನಮ್ಮೊಡನೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಉಮೇಶ್ ಕತ್ತಿ ಹಠಾತ್ ನಿಧನ ನೋವನ್ನು ತಂದಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಸಚಿವ ಉಮೇಶ್ ವಿಶ್ವನಾಥ್  ಕತ್ತಿಯವರು  ದಕ್ಷ ಹಾಗೂ ನೇರನುಡಿಯ ರಾಜಕಾರಣಿಯಾಗಿದ್ದರು. ಕಳೆದ ತಿಂಗಳು 7ಮತ್ತು 8ರಂದು ತಾಲೂಕಿನ ಮೇಕೆದಾಟು ಹಾಗೂ ಗೋಪಿನಾಥಮ್, ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಗೋಪಿನಾಥಂನಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಅರಣ್ಯ ಇಲಾಖೆಯ ಆರ್.ಎಫ್. ಒ.ಕಚೇರಿಯನ್ನು ಉದ್ಘಾಟಿಸಿದ್ದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ದರ್ಶನ  ಪಡೆದು ಪೂಜೆ ಸಲ್ಲಿಸಿ ಅಲ್ಲಿನ ಅಧಿಕಾರಿಗಳ ಜೊತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಬಳಿಕ ಸಾಲೂರು ಮಠಕ್ಕೆ ತೆರಳಿ ಹಿರಿಯ ಗುರುಸ್ವಾಮಿಗಳ ಆಶೀರ್ವಾದ ಪಡೆದು ಹಿರಿಯ ಶ್ರೀಗಳ ಯೋಗಕ್ಷೇಮವನ್ನು ವಿಚಾರಿಸಿದ್ದರು. ಮಂಗಳವಾರ  ರಾತ್ರಿ ದಿಡೀರ್ ಹೃದಯಾಘಾತ ಸಂಭವಿಸಿ ನಿಧನರಾಗಿರುವುದು ನೋವನ್ನು ತಂದಿದೆ. ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರಿಗೆ ಭಗವಂತ ಚಿರಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗದವರು, ಹಿತೈಷಿಗಳು, ಅಭಿಮಾನಿ ಬಳಗಕ್ಕೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!