ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಸುತ್ತೂರು ವರುಣ ಕ್ಷೇತ್ರದ ತಾಯೂರು ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗೆಜ್ಜಿಗನಹಳ್ಳಿ ಹಾಗೂ ಸಮೀಪದ ಹಲವಾರು ಗ್ರಾಮಗಳಿಗೆ ದ್ವಿಚಕ್ರವಾಹನದಲ್ಲಿ ತೆರಳುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ವೀಕ್ಷಿಸಿದರು.
ಹಾಗೂ
ಗ್ರಾಮ ಸಭೆಗಳನ್ನು ನಡೆಸಲು ದ್ವಿಚಕ್ರವಾಹನದಲ್ಲಿ ತೆರಳಿದ ಅವರು ಅಲ್ಲಿನ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಗೂ ಗ್ರಾಮದ ಎಲ್ಲಾ ಬೀದಿಗಳಲ್ಲಿರುವ ರಸ್ತೆಗಳು. ಚರಂಡಿಗಳು. ಕುಡಿಯೋ ನೀರಿನ ಮಿನಿ ಟ್ಯಾಂಕನ್ನು ವೀಕ್ಷಿಸಿದರು. ಕೆಲವು ಗ್ರಾಮಗಳ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ತಾಯೂರ್ ಬಸವರಾಜು. ಗ್ರಾಮದ ಗೌಡ ರಾದ ಸಂತೋಷ್. ಗೆಜ್ಜೆನಹಳ್ಳಿ ವಿಠಲ್. ಶಿವಣ್ಣ.ಕೆಂಪಣ್ಣ. ರಂಗಸ್ವಾಮಿ.. ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಹಾಜರಿದ್ದರು





