ಮೈಸೂರು : ಹುಣಸೂರು, ಪಿರಿಯಾಪಟ್ಟಣ, ಹಾಗೂ ಎಚ್.ಡಿ.ಕೋಟೆ ತಾಲ್ಲೂಕು ವ್ಯಾಪ್ತಿಯ ಹಾಡಿಗಳಾದ ಅಬ್ಬಲಾತಿ, ಮಾಲಂಗಿ, ಗೋಮಾಳ,ಬೋರನಕಟ್ಟೆ,ಹೊಸೂರು, ಕೆರೆಮಾಳ, ಲಕ್ಷ್ಮೀಪುರ, ಹಾಗೂ ಆನೆ ಚೌಕೂರಿನಲ್ಲಿ ವಾಸಿಸುತ್ತಿರುವ 452 ಕುಟುಂಬಗಳು ವನ್ಯ ಜೀವಿಗಳ ಸಿಬ್ಬಂದಿ ಕಛೇರಿಯ ಎದುರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರ ತೆಗೆದ 3145ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ಗಳ ಮೂಲಕ ಶಿಫಾರಸ್ಸು ಮಾಡಲಾಗಿದೆ.ಅದರಂತೆ ಪಿರಿಯಾಪಟ್ಟಣ ತಾಲ್ಲೂಕಿನ ಅರಣ್ಯ ಇಲಾಖೆಯು ಪ್ರಾದೇಶಿಕ ಅರಣ್ಯ ಆಗಿದ್ದು ಡಾ ಮುಜಾಫರ್ ಆಸದಿ ವರದಿ ಹಾಗೂ ಹೈಕೋರ್ಟ್ ತೀರ್ಪು 2014 ಜುಲೈ ರಂತೆ ಪರಗಣಿಸಿ ಎಂದು 12ದಿನ ದಿಂದ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಒಕ್ಕೂಟವು ನಿರಂತರ ಹೋರಾಟ ಮಾಡುತ್ತಿದ್ದಾರೆ.