ಮೈಸೂರು: ಮೈಸೂರು ರಂಗಾಯಣವು ಸಿದ್ಧಪಡಿಸಿ ಪ್ರಸ್ತುತಪಡಿಸುತ್ತಿರುವ ‘ಟಿಪ್ಪು ನಿಜಕನಸುಗಳು’ ನಾಟಕ ನ.೨೦ರಂದು ಸಂಜೆ ೬ ಗಂಟೆಗೆ ಪ್ರದರ್ಶನಗೊಳ್ಳಲಿದೆ.
ನಾಟಕ ವೀಕ್ಷಣೆಗೆ ಟಿಕೆಟ್ ಪಡೆದು ಬರುವುದರಿಂದ ಯಾವುದೇ ಫೋಟೊ ಮತ್ತು ವೀಡಿಯೋ ಚಿತ್ರೀಕರಿಸುವುದನ್ನು ನಿಷೇಧಿಸಲಾಗಿದೆ. ನಾಟಕಕ್ಕೂ ಮುನ್ನ ಯಾವುದೇ ಸಭೆ ಸಮಾರಂಭ ಇರುವುದಿಲ್ಲ. ಮಾಧ್ಯಮದವರಿಗೆ ಫೋಟೊಗಳನ್ನು ಕಳುಹಿಸಿಕೊಡಲಾಗುವುದು ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ನಾಳೆ ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನ : ಫೋಟೊ, ವೀಡಿಯೋ ಚಿತ್ರೀಕರಣಕ್ಕಿಲ್ಲ ಅವಕಾಶ!





