ಮೈಸೂರು: ಸೇವಾ ಚಿಲುಮೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ನ.೧೩ರಂದು ಬೆಳಿಗ್ಗೆ ೧೧ಕ್ಕೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಸರೆಯ ಶ್ರೀ ಕಾಲಭೈರವೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ೯ರಿಂದ ೧೬ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಕನ್ನಡ ನಾಡು-ನುಡಿ ಬಗ್ಗೆ ಪ್ರಬಂಧ ಬರೆಯಬೇಕಾಗಿದೆ. ಸ್ಪರ್ಧೆುಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನವಾಗಿ ೨,೦೦೦ ರೂ., ದ್ವಿತೀಯ ಬಹುಮಾನವಾಗಿ ೧,೦೦೦ ರೂ. ಹಾಗೂ ತೃತೀಯ ಬಹುಮಾನವಾಗಿ ೫೦೦ ರೂ. ನಿಗದಿ ಮಾಡಲಾಗಿದೆ. ವಿವರಗಳಿಗೆ ಮೊ.ಸಂ.೮೪೩೧೩೬೨೪೦೨ನ್ನು ಸಂಪರ್ಕಿಸಬಹುದು ಎಂದರು.
ಟ್ರಸ್ಟ್‌ನ ಪದಾಧಿಕಾರಿಗಳಾದ ಮೋಹನ್, ರೋಹಿತ್ರರ, ಅಶ್ರಥ್ ಉಲ್ಲ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





