ಹೆಚ್. ಡಿ ಕೋಟೆ : ತಾಲ್ಲೂಕಿನ ತಾರಕ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಕಾಣಿಸಿಕೊಂಡು ಎರಡು ಮೂರು ಹಸುಗಳನ್ನು ತಿಂದು ಹಾಕಿದ್ದು ಗ್ರಾಮಸ್ಥರಲ್ಲಿಯೂ ಭಯಭೀತಿಯನ್ನು ಉಂಟುಮಾಡಿದೆ. ಹುಲಿಯನ್ನು ಸೆರೆ ಹಿಡಿಯಲು ಎಸ್ ಟಿ ಪಿ ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ತೊಡಗಿದ್ದಾರೆ
ಹುಲಿಯ ಉಪಟಳದ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಗಳು ಸ್ಥಳವನ್ನು ಪರಿಶೀಲನೆ ಮಾಡಿ ಹುಲಿ ಇರುವುದನ್ನು ಖಚಿತಪಡಿಸಿಕೊಂಡು ನಂತರ ಮತ್ತೆ ಗೂಡು ಆನೆ ಶಿಬಿರದಿಂದ ಅಶ್ವತ್ಥಾಮ ಮತ್ತು ಬಲರಾಮ ಆನೆಗಳನ್ನು ಕಾರ್ಯಚರಣೆಗೆ ತೊಡಗಿಸಿಕೊಂಡಿದ್ದು ಅಂತರ ಸಂತೆ ವಲಯದ ಸಿಬ್ಬಂದಿಗಳು ಮೇಟಿಕುಪ್ಪೆ ವಲಯದ ಸಿಬ್ಬಂದಿಗಳು ಸೇರಿದಂತೆ ಎಸ್ ಟಿ ಪಿ ಎಫ್ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯನ್ನು ಕೈಗೊಂಡು ಹುಲಿಯನ್ನು ಸೆರೆ ಹಿಡಿಯಲು ನಿರತರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಂತರಸಂತೆ ವಲಯದ ಅರಣ್ಯ ಅಧಿಕಾರಿ ಸಿದ್ದರಾಜು, ಡಿ ಆರ್ ಎಫ್ ಓ ಆಂತೋನಿ, ಮಂಜುನಾಥ್ ಆರಾಧ್ಯ, ಚಂದನ್ ಮತ್ತು ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.