ಕೊಡಗು : ಜಿಲ್ಲೆಯಲ್ಲಿ ಪ್ರವಾಸಿಗರು ಕೈ ಚಳಕ ತೋರಿಸಿದ್ದು, ಮದ್ಯದಂಗಡಿಯಲ್ಲಿ 8 ಸಾವಿರ ಮೌಲ್ಯದ ಬಿಯರ್ ಖರೀದಿ ಮಾಡಿ ಹಣ ಕೊಡದೇ ಎಸ್ಕೇಪ್ ಆಗಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರದ ನ್ಯಾಷನಲ್ ವೈನ್ಸ್ ನಲ್ಲಿ ಈ ಘಟನೆ ನಡೆದಿದೆ. ಮೊದಲು 8 ಸಾವಿರ ಮೌಲ್ಯದ ಬಿಯರ್ ಬೇಕೆಂದು ಕೇಳಿ ಎಲ್ಲವನ್ನೂ ಬಾಕ್ಸ್ ನಲ್ಲಿ ಪ್ಯಾಕ್ ಮಾಡಿಕೊಂಡಿದ್ದಾರೆ.
ನಂತರ ಸ್ಕ್ಯಾನ್ ಮಾಡುವ ನೆಪದಲ್ಲಿ ನಾಟಕವಾಗಿ ಕಾರು ಹತ್ತಿ ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ವೈನ್ ಶಾಪ್ ಮಾಲೀಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.