Mysore
27
few clouds

Social Media

ಶನಿವಾರ, 03 ಜನವರಿ 2026
Light
Dark

ತಿ.ನರಸೀಪುರ: ಗ್ರಾಮಸ್ಥರ ನಿದ್ದೆಗೆಡಿಸುತ್ತಿವೆ ಚಿರತೆಗಳು

ಮೈಸೂರು: ಮಹಾರಾಜ ಕಾಲೇಜಿನ ವಿದ್ಯಾರ್ಥಿ ಚಿರತೆಗೆ ಆಹಾರವಾದ ತಿ.ನರಸೀಪುರದ ಮಲ್ಲಪ್ಪನ ಬೆಟ್ಟದ ಸುತ್ತಮುತ್ತ ಜೋಡಿ ಚಿರತೆಗಳು ಹಾಡಹಗಲಲ್ಲೇ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.

ತಿ.ನರಸೀಪುರದ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಕಾರ್ತಿಕ ಜಾತ್ರೆಗೆಂದು ಹೊರಟ ಯುವಕನ ಮೇಲೆ ಸೋಮವಾರ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಮೈಸೂರಿನ ಮಹಾರಾಜ ಕಾಲೇಜಿನ ಬಿಕಾಂ ವಿದ್ಯಾರ್ಥಿಯಾದ, ಗ್ರಾಮದ ಚನ್ನಮಲ್ಲದೇವರು ಎಂಬವರ ಪುತ್ರ ಮಂಜುನಾಥ್( ೧೯) ಚಿರತೆಗೆ ಬಲಿಯಾದ ಬಳಿಕ ಅರಣ್ಯ ಇಲಾಖೆ ಬೋನು ಇರಿಸಿ ಚಿರತೆಗಳನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿದೆ. ಈ ನಡುವೆ ಬೆಟ್ಟದ ಮೇಲೆ ಎರಡು ಚಿರತೆಗಳು ಕಾಣಸಿಕೊಂಡಿವೆ.

ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿ ಉಕ್ಕಲಗೆರೆ ಸುತ್ತಮುತ್ತ ಚಿರತೆ ಕಾಟವಿದ್ದರೂ ಜನರ ಮೇಲೆ ಎಂದೂ ದಾಳಿ ಮಾಡಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿದ್ದ ವಿದ್ಯಾರ್ಥಿ ಮೇಲೆ ಎರಗಿ ದಾಳಿ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟವಿದೆ. ಮಹದೇವಮ್ಮ ಎಂಬುವರ ಮನೆಗೆ ನುಗ್ಗಿ ಮೇಕೆಗಳನ್ನು ಚಿರತೆ ಹೊತ್ತೊಯ್ದಿತ್ತು. ನಾಯಿಗಳ ಮೇಲೂ ದಾಳಿ ಮಾಡಿತ್ತು. ಮಲ್ಲಪ್ಪನ ಬೆಟ್ಟದ ಸುತ್ತ ಮುತ್ತಲಿನ ಗ್ರಾಮದ ಜನ ರಾತ್ರಿ ವೇಳೆ ಹೊರಗೆ ಬರಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಗಸ್ತು ತಿರುಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಮೈಸೂರು ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ನಡುವೆಯೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಎಫ್ ಡಾ.ಮಾಲತಿಪ್ರಿಯ, ಡಿಸಿಎಫ್ ಕಮಲಾ ಕರಿಕಾಳನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಶಿವರಾಮ್ ಹಾಗೂ ತಂಡ ಗ್ರಾಮದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದೆ. ಆರ್‌ಎಫ್‌ಒ ಅವರ ನೇತೃತ್ವದ ತಂಡ ಮೂರು ಬೋನುಗಳನ್ನು ಇರಿಸಿದೆ.

೧೫ ಚಿರತೆ ಸೆರೆ :

ಮೈಸೂರು ಭಾಗದಲ್ಲಿ ಕಳೆದ ಆರು ತಿಂಗಳಲ್ಲಿ ೧೫ ಚಿರತೆಗಳು ಸೆರೆ ಹಿಡಿಯಾಗಿರುವುದು ಚಿರತೆಗಳ ಹಾವಳಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಕೆಆರ್‌ಎಸ್, ಮೈಸೂರಿನ ಆರ್‌ಬಿಐ ಘಟಕದ ಆವರಣದಲ್ಲಿ ಪತ್ತೆಯಾದ ಚಿರತೆ ಇನ್ನೂ ಬೋನಿಗೆ ಬಿದ್ದಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!