ಸಿದ್ದಾಪುರ ಸಮೀಪದ ಅವರೆಗುಂದ ಗ್ರಾಮದಲ್ಲಿ
ಘಟನೆ.
ಸಿದ್ದಾಪುರ :- ಅಪರಿಚಿತ ವ್ಯಕ್ತಿಗಳು ಮನೆಯಲ್ಲಿದ್ದ ಮಾಲೀಕನನ್ನ ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ನಡೆದಿದೆ ಘಟನೆ.
ಅವರೆಗುಂದ ಗ್ರಾಮದಲ್ಲಿ ವಾಸವಾಗಿರುವ ಚಂಗಪ್ಪ ಎಂಬವರು ಮನೆಯಲ್ಲಿ ಒಬ್ಬಂಟಿ ಇರುವ ಸಂದರ್ಭದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕೈ ಕಾಲು ಕಟ್ಟಿ ಬೆದರಿಕೆ ಹಾಕಿ
ಮನೆಯಲ್ಲಿದ್ದ 90 ಸಾವಿರ ನಗದು ಹಾಗೂ ಚಿನ್ನಾಭರಣವನ್ನು ದೋಚಿ ಪಾರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಚಂಗಪ್ಪ ಪಕ್ಕದ ಮನೆಗೆ ವಿಷಯ ತಿಳಿಸಿ
ತಕ್ಷಣ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಎಸ್ ಪಿ ಕ್ಯಾಪ್ಟನ್ ಅಯ್ಯಪ್ಪ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದಾರೆ.
ಶ್ವಾನದಳ, ಬೆರಳಚ್ಚು ತಂಡ ಪರಿಶೀಲನೆ ನಡೆಸಿದ್ದಾರೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ





