ಮೈಸೂರು: ನಗರದ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ನಿರ್ವಹಣಾ ಎರಡನೇ ಘಟಕ ಡಿಸೆಂಬರ್ ಅಂತ್ಯಕ್ಕೆಪ್ರಾರಂಭವಾಗಲಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪಾ ಘಟಕದಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ಘಟಕದಲ್ಲಿ ಶೇ.೯೦ರಷ್ಟು ಕಾಮಗಾರಿಗಳು ಮುಗಿದಿದ್ದು,ರಸ್ತೆ,ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸುವ ಕೆಲಸ ಮಾಡಬೇಕಾಗಿದೆ. ಡಿಸೆಂಬರ್ ಹದಿನೈದರೊಳಗೆ ಮುಗಿಸಿ ನಂತರ ಪ್ರಾಯೋಗಿಕವಾಗಿ ತ್ಯಾಜ್ಯ ನಿರ್ವಹಣೆ ಕೆಲಸ ಶುರುವಾಗಲಿದೆ. ಈ ಘಟಕವು ಪ್ರಾರಂಭವಾದ ಮೇಲೆ ನರಸಿಂಹರಾಜ ಕ್ಷೇತ್ರದ ಬಹುತೇಕ ಪ್ರದೇಶಗಳ ಬಡಾವಣೆಯ ತ್ಯಾಜ್ಯಗಳನ್ನು ಸಾಗಣೆ ಮಾಡಿ ವಿಲೇವಾರಿ ಮಾಡಲಾಗುತ್ತದೆ. ವಿದ್ಯಾರಣ್ಯಪುರಂ ಸೀವೆಜ್ ಫಾರಂಗೆ ಸಾಗಣೆ ತಪ್ಪಲಿದೆ.
ಮೈಸೂರು ನಗರದ ಕೆಸರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಎರಡನೇ ಘಟಕ ಡಿಸೆಂಬರ್ ಅಂತ್ಯಕ್ಕೆ ಆರಂಭ





