ಹುಣಸೂರು: ಸಾಕು ಪ್ರಾಣಿ, ಜಾನುವಾರುಗಳನ್ನು ಕೊಂದು ಉಪಟಳ ನೀಡುತ್ತಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ.
ತಾಲ್ಲೂಕಿನ ಹನಗೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉಪಟಳ ನೀಡುತ್ತಿದ್ದ ಈ ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಳಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿಗೌಡರ ಜಮೀನಿನಲ್ಲಿ ಬೋನು ಇಟ್ಟಿತ್ತು. ಬುಧವಾರ ಮುಂಜಾನೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಚಿರತೆಯನ್ನು ಅಂತರಸಂತೆ ವಲಯದ ಕಾಡಿಗೆ ಬಿಡಲಾಗಿದೆ ಎಂದು ಆರ್‌ಎಫ್‌ಓ ನಂದಕುಮಾರ್ ತಿಳಿಸಿದ್ದಾರೆ.