ಸಿದ್ದಾಪುರ: ಹಾಸನ ಜಿಲ್ಲೆಯ ಅರಕಲಗೂಡು ವಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗಿನ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಎಂ.ಜಿ.ರಸ್ತೆಯ ನಿವಾಸಿಗಳಾದ ಉಮ್ಮರ್ (47) ಮತ್ತು ಮೂರ್ತಿ (39) ಮೃತ ದುರ್ದೈವಿಗಳು.
ಮೂರ್ತಿಯ ಕೈ ಚಿಕಿತ್ಸೆಗೆಂದು ಹಾಸನ ಜಿಲ್ಲೆಯ ಅರಕಲಗೋಡಿಗೆ ಬೈಕಿನಲ್ಲಿ ತೆರಳಿದ ಇಬ್ಬರು ಹಿಂತಿರುಗಿ ಬರುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .





