ಹೊಸೂರು : ಸಾಲಿಗ್ರಾಮ ತಾಲ್ಲೂಕಿನ ಮಾಯಿಗೌಡನಹಳ್ಳಿ ಗ್ರಾಮಪಂಚಾಯಿತಿಗೆ ಸೇರಿದ ವಡ್ಡರಕೊಪ್ಪಲು ಗ್ರಾಮದ ಬಸವ ಮೃತಪಟ್ಟಿತು.
ಗ್ರಾಮದಿಂದ ಗುಡುನಹಳ್ಳಿ ಸಮೀಪದ ಬಸವೇಶ್ವರ ದೇವಾಲಯಕ್ಕೆ ಬಿಡಲಾಗಿದ್ದ ಬಸವ ಗ್ರಾಮದ ಆನಂದ್ ಎಂಬವರ ಮನೆಯ ಸಮೀಪ ಅನಾರೋಗ್ಯದಿಂದ ಕೊನೆಯುಸಿರೆಳೆಯಿತು.
ಗ್ರಾಮಸ್ಥರು ಬಸವನ ಅಂತಿಮ ದರ್ಶನ ಪಡೆದು ಪೂಜೆ ಪುರಸ್ಕಾರ ನೆರವೇರಿಸಿದ ನಂತರ ಗುಡುಗನಹಳ್ಳಿ ಬಸವೇಶ್ವರ ದೇವಾಲಯದ ಬಳಿಗೆ ಟ್ರಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಕರೆತಂದು ಅಂತ್ಯಕ್ರಿಯೆ ನಡೆಸಿದರು.
ಮಾಯಿಗೌಡನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸದಸ್ಯ ಗಂಗಾಧರ್, ಗ್ರಾಮದ ಮುಖಂಡರಾದ ಸ್ವಾಮೀಗೌಡ, ತಮ್ಮೇಗೌಡ, ಲೋಕೇಶ್, ಯೋಗೇಶ್, ಹಿರಣಯ್ಯ, ಪ್ರಭಾಕರ್, ಕೆಂಪರಾಜು ಇತರರು ಹಾಜರಿದ್ದರು.