ಮಡಿಕೇರಿ: ಮೆದುಳು ನಿಷ್ಕ್ರಿಯಗೊಂಡು ಕೊನೆಯುಸಿರೆಳೆದ ಶಿಕ್ಷಿಯ ಅಂಗಾಂಗಗಳನ್ನು ಕುಟುಂಬಸ್ಥರ ಸಮ್ಮತಿಯಂತೆ ದಾನ ಮಾಡಲಾಗಿದೆ.
ನಗರದ ಸುದರ್ಶನ ಬಡಾವಣೆ ನಿವಾಸಿ ಗಪ್ಪು ಗಣಪತಿ ಅವರ ಪತ್ನಿ ಪಂದ್ಯಂಡ ಆಶಾ (೫೩) ಮೃತ ದುರ್ದೈವಿ.
ಕಳೆದ ಕೆಲ ದಿನಗಳ ಹಿಂದೆ ಆಶಾ ಬೆಂಗಳೂರಿನಲ್ಲಿ ನೆಲೆಸಿದ್ದ ಸಂಬಂಧಿಕರ ಮನೆಗೆ ತೆರಳಿದ್ದ ಆಶಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಿಸಿದಾಗ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿರುವುದು ಕಂಡು ಬಂದಿತ್ತು. ಅದಾಗಲೇ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಶಿಕ್ಷಕಿ ಆಶಾ ಅವರ ಕಣ್ಣು, ಕಿಡ್ನಿ, ಹೃದಯ, ಯಕೃತ್ತು ಮತ್ತಿತರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಮಕ್ಕಳ ಬಗ್ಗೆ ಆಶಾ ಅಪಾರ ಪ್ರೀತಿ ಹೊಂದಿದ್ದ ಹಿನ್ನೆಲೆ ಮಕ್ಕಳಿಗಾಗಿಯೇ ಅಂಗಾಂಗ ಬಳಸಿಕೊಳ್ಳುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.