Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಹನೂರು : ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತರಾಜ ಶಾಲಾ ವಿದ್ಯಾರ್ಥಿಗಳ ಸಾಧನೆ

ಹನೂರು: ಪಟ್ಟಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತ ರಾಜ ಶಾಲೆಯ ವಿದ್ಯಾರ್ಥಿಗಳು ಅಪ್ರತಿಮೆ ಸಾಧನೆ ತೋರಿ ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಸಂಸ್ಥೆ ಯ ವ್ಯವಸ್ಥಾಪಕ ಫಾದರ್ ರೋಷನ್ ಬಾಬು ಅಭಿನಂದನೆ ತಿಳಿಸಿದ್ದಾರೆ.

ಬಾಲಕರ ವಿಭಾಗ:
100 ಮೀ ಓಟದಲ್ಲಿ ಯತಿನ್ ಪ್ರಥಮ, 200 ಮೀ ಓಟದಲ್ಲಿ ಯತಿನ್ ದ್ವಿತೀಯ, 400 ಮೀ ಓಟದಲ್ಲಿ ದಿಲೀಪ್ ತೃತೀಯ,
800 ಮೀ ಓಟದಲ್ಲಿ ನಂದೀಶ್ ಪ್ರಥಮ, ಕಿರಣ್ ದ್ವಿತೀಯ.
1500 ಮೀ ಓಟದಲ್ಲಿ ಅಜಿತ್ ಅಂತೋಣಿಸ್ವಾಮಿ ದ್ವಿತೀಯ.
3000 ಮೀ ಓಟದಲ್ಲಿ ಅಶ್ವಿನ್ ಪ್ರಥಮ ಮತ್ತು ನಂದಾ ವಿಘ್ನೇಶ್ ದ್ವಿತೀಯ.
ಉದ್ದ ಜಿಗಿತದಲ್ಲಿ ಅಜಿತ್ ಅಂತೋಣಿ ಪ್ರಥಮ.
ಗುಂಡು ಎಸೆತದಲ್ಲಿ ಅಜಿತ್ ತೃತೀಯ.
ಬಾಲಕರ 4× 100 ರಿಲೇ ಯತೀನ್ ತಂಡ ಪ್ರಥಮ.
ಬಾಲಕರ 4× 400 ರಿಲೇ ಕಿರಣ್ ತಂಡ ಪ್ರಥಮ.


ಬಾಲಕಿಯ ವಿಭಾಗ: 
100 ಮೀಟರ್ ಓಟದಲ್ಲಿ ಚೈತ್ರ ಪ್ರಥಮ , ಮಹೇಶ್ವರಿ ತೃತೀಯ.
200 ಮೀ ಓಟದಲ್ಲಿ ಅನುಷಾ ತೃತೀಯ.
400 ಮೀ ನಂದಿನಿ ಪ್ರಥಮ, ಚೈತ್ರ ದ್ವಿತೀಯ.
800 ಮೀ ರಮ್ಯಾ ಪ್ರಥಮ,
ವಿನಿತಾ ದ್ವಿತೀಯ.
1500 ಮೀ ಓಟದಲ್ಲಿ ನಂದಿನಿ ದ್ವಿತೀಯ, ಮಹೇಶ್ವರಿ ತೃತೀಯ.
4× 100 ರಿಲೇ ನಂದಿನಿ ತಂಡ ಪ್ರಥಮ.
4× 400 ರಿಲೇ ವಿನಿತಾ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕರ ಖೋ ಖೋ ಪ್ರಥಮ ಸ್ಥಾನ,
ಬಾಲಕಿಯರ ಖೋ ಖೋ ಪ್ರಥಮ ಸ್ಥಾನ, ಬಾಲಕರ ಷಟಲ್ ಪ್ರಥಮ ಸ್ಥಾನ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ. ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನ, ಬಾಲಕರ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡೆಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲೆ ಸಿಸ್ಟರ್ ಜಾನ್ ಶಾಂತಿ, ತರಬೇತುದಾರ ವಿನೋದ್ ಉಪನ್ಯಾಸಕರಾದ ಪ್ರಕಾಶ್, ಸೋಮಣ್ಣ, ಪವಿತ್ರ, ಪ್ರೀತಿ, ಸುಮ ಇನ್ನಿತರರು ಅಭಿನಂದಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!