Mysore
33
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಜಿ.ಟಿ.ದೇವೇಗೌಡರಿಗೆ ಜ್ವರ, ವಿಶ್ರಾಂತಿ ಪಡೆಯಲು ವೈದ್ಯರ ಸಲಹೆ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಜಾ.ದಳದ ಮುಖಂಡ ಜಿ.ಟಿ.ದೇವೇಗೌಡರು ಜ್ವರದಿಂದ ಬಳಲುತ್ತಿರುವ ಕಾರಣ ನ.೧೦ ಮತ್ತು ೧೧ರಂದು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗುವುದಿಲ್ಲ. ಬೆಂಗಳೂರಿನಲ್ಲಿರುವ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು ಎರಡು ದಿನಗಳ ಕಾಲ ಸರ್ಕಾರಿ,ಖಾಸಗಿ ಸಭೆ,ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ. ಇದಲ್ಲದೆ, ಒಂಟಿಕೊಪ್ಪಲಿನಲ್ಲಿರುವ ನಿವಾಸ ಮತ್ತು ಜಲದರ್ಶಿನಿ ಅತಿಥಿಗೃಹದಲ್ಲಿ ಸಾರ್ವಜನಿಕರ ಸಂಪರ್ಕಕ್ಕೆ ಇರುವುದಿಲ್ಲ. ಮುಖಂಡರು,ಕಾರ್ಯಕರ್ತರು ಕಚೇರಿಗೆ ಬಂದು ಅಲೆದಾಡಬಾರದೆಂದು ಶಾಸಕರ ಅಪ್ತಸಹಾಯಕರು ಹೇಳಿದ್ದಾರೆ.ಜ್ವರದಿಂದ ಬಳಲುತ್ತಿರುವ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿರುವುದರಿಂದ ಯಾರನ್ನು ಭೇಟಿ ಮಾಡುತ್ತಿಲ್ಲವೆಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!